ಮಡಿಕೇರಿ, ಜ. ೩: ಗೌಸಿಯ ಸ್ವಲಾತ್ ಕಮಿಟಿಯ ೩೨ನೇ ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ ಧಾರ್ಮಿಕ ಪ್ರಭಾಷಣ ಮತ್ತು ಬಡ ಹೆಣ್ಣುಮಗಳ ವಿವಾಹ ಕಾರ್ಯಕ್ರಮ ತಾ.೭,೮ ರಂದು ಮಾದಾಪುರದಲ್ಲಿ ನಡೆಯಲಿದೆ ಎಂದು ಗೌಸಿಯ ಸ್ವಲಾತ್ ಕಮಿಟಿಯ ಅಧ್ಯಕ್ಷ ಎಂ. ಉಮ್ಮರ್ ತಿಳಿಸಿದರು.
ಮಾದಾಪುರದ ಮೊಹಿಯ್ಯದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾ.೭ರಂದು ಗೌಸಿಯ ಸ್ವಲಾತ್ ಕಮಿಟಿಯ ಅಧ್ಯಕ್ಷ ಎಂ. ಉಮ್ಮರ್ ಅಧ್ಯಕ್ಷತೆಯಲ್ಲಿ ಸಂಜೆ ೬.೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮೊಹಿಯ್ಯದ್ದೀನ್ ಜುಮಾ ಮಸೀದಿ ಖತೀಬರಾದ ಮೊಹಮ್ಮದ್ ಶಾಫಿ ಸಖಾಫಿ, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎ.ಬಿ. ಉಮ್ಮರ್ ಇತರರು ಪಾಲ್ಗೊಳ್ಳಲಿದ್ದಾರೆ. ಸಂಜೆ ೭ ಗಂಟೆಗೆ ಸಮೀರ್ ದಾರಿಮಿ ಕೊಲ್ಲಂ ಅವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾ.೮ರಂದು ಸಂಜೆ ೬ಗಂಟೆಗೆ ಪ್ರವಾದಿವರ್ಯರ್ ಅಸ್ಸಯ್ಯಿದ್ ಬಾಯಾರ್ ತಂಙಳ್ ನೇತೃತ್ವದಲ್ಲಿ ಬಡ ಹೆಣ್ಣುಮಗಳ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಮೊಹಿಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎ.ಪಿ.ಅಕ್ಬರ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೊಹಿಯ್ಯದ್ದೀನ್ ಜುಮಾ ಮಸೀದಿ ಮಾಜಿ ಕಾರ್ಯದರ್ಶಿ ಎಸ್. ಅಬ್ದುಲ್ ನಾಸಿರ್, ಗೌಸಿಯ ಸ್ವಲಾತ್ ಕಮಿಟಿಯ ಕಾರ್ಯದರ್ಶಿ ನಾಜ್ಹೀಮ್, ಕೋಶಾಧಿಕಾರಿ ಎಂ.ಎ. ಅಬ್ದುಲ್ಲ, ಸದಸ್ಯರಾದ ಸಂಶುದ್ದೀನ್, ಸಮ್ಮಾನ್ ಉಪಸ್ಥಿತರಿದ್ದರು.