ವಾಷಿಂಗ್ಟನ್, ಜ. ೩: ವೆನೆಜುವೆಲಾ ದೇಶದ ಮೇಲೆ ವೈಮಾನಿಕ ದಾಳಿ ನಡೆಸಿರುವ ಅಮೇರಿಕಾ, ದಾಳಿ ಆರಂಭವಾಗಿ ಕೆಲವೇ ಗಂಟೆಗಳಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿದಿರುವುದಾಗಿ ಪ್ರಕಟಿಸಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಮತ್ತು ಆಡಳಿತ ಬದಲಾವಣೆ ಈ ದಾಳಿಯ ಹಿಂದಿನ ಪ್ರಮುಖ ಕಾರಣಗಳಾಗಿವೆ. ಅಮೇರಿಕಾದ ರಾಷ್ಟಿçÃಯ ಭದ್ರತೆಗೆ ಅಪಾಯದ ಅನುಮಾನವೂ ಇದೆ ಎಂದು ಅಮೇರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ವೆನೆಜುವೆಲಾ ಅಧ್ಯಕ್ಷರಿಗೆ ಪದೇ ಪದೇ ಎಚ್ಚರಿಕೆಗಳನ್ನು ಕೊಡುತ್ತಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ವಾಯುದಾಳಿಯನ್ನು ನಡೆಸಿದ್ದಾರೆ. ಅಮೇರಿಕಾ ದಾಳಿ ನಡೆಸಿದ ಬೆನ್ನಲ್ಲೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ದಿದೆ. ಇವರ ಬಂಧನವನ್ನು ಟ್ರಂಪ್ ದೃಢಪಡಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಅಮೇರಿಕಾದ ಏಜೆನ್ಸಿಗಳ ಸಹಯೋಗದೊಂದಿಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಡೆಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ವೆನೆಜುವೆಲಾ ಅಧ್ಯಕ್ಷ ನಿಕೋಲನ್ ಮಡುರೊ ಪ್ರತಿಕ್ರಿಯಿಸಿ ತಾನು ಮಾದಕ ದ್ರವ್ಯ ನಿಯಂತ್ರಣಕ್ಕೆ ಎಲ್ಲ ರೀತಿಯ ಸಹಕಾರದ ಭರವಸೆಯಿತ್ತಿದ್ದೆ. ಆದರೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ವೆನೆಜುವೆಲಾದಲ್ಲಿ ಲಭ್ಯವಿರುವ ತೈಲ ಸಂಪತ್ತಿನ ಮೇಲೆ ಗೃಧ್ರ ದೃಷ್ಟಿಯಿರಿಸಿ ಇದರ ಮೇಲೆ ಅಮೇರಿಕಾದ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಧಾಳಿ ಸಂದರ್ಭ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸರಣಿ ಸ್ಫೋಟಗಳಿಂದ ನಡುಗಿತು. ರಾಜಧಾನಿಯ ವಿವಿಧ ಭಾಗಗಳಲ್ಲಿ ಕನಿಷ್ಟ ಏಳು ದೊಡ್ಡ ಸ್ಫೋಟಗಳು ಕೇಳಿಬಂದವು. ವೆನೆಜುವೆಲಾದ ಮೇಲಿನ ಸಂಪೂರ್ಣ ದಾಳಿ ಸುಮಾರು ೩೦ ನಿಮಿಷಗಳಲ್ಲೇ ನಡೆದು ಹೋಯಿತು ಎಂದು ವರದಿಯಾಗಿದೆ. ಹಿಗುರೋಟ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದ ವೀಡಿಯೋಗಳು ವೈರಲ್ ಆಗಿವೆ. ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಅಮೇರಿಕಾ ಈ ಹಿಂದೆ ವೆನೆಜುವೆಲಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ನಾಶಪಡಿಸಿತ್ತು ಎಂದು ನಂಬಲಾಗಿದೆ. ಕ್ಯಾರಕಾಸ್ನ ಅತಿದೊಡ್ಡ ಮಿಲಿಟರಿ ಸಂಕೀರ್ಣವಾದ ಫ್ಯುರ್ಟೆ ಟಿಯುನಾದಿಂದ ಹೊಗೆ ಮೇಲೇರುತ್ತಿರುವುದು ಕಂಡುಬAದಿದೆ. ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡು ಅವ್ಯವಸ್ಥೆ ಸೃಷ್ಟಿಯಾಗಿದೆ.

ವೆನೆಜುವೆಲಾ ಸರ್ಕಾರ ಇದನ್ನು ಯುಎಸ್ ಸಾಮ್ರಾಜ್ಯಶಾಹಿಯ ದಾಳಿ ಎಂದು ಕರೆದಿದೆ. ಸಾರ್ವಜನಿಕರು ಇದರ ವಿರುದ್ಧ ಬೀದಿಗಿಳಿಯುವಂತೆ ಮನವಿ ಮಾಡಿದೆ.