ಜೇಡ್ಲ, ಜ.೪: ವೇದೋಕ್ತ ಧರ್ಮಾಚರಣೆ ಮೂಲಕ ವೇದನಾ ರಹಿತ ಜೀವನ ಸಾಧ್ಯ. ನಮ್ಮ ಪೂರ್ವಜರು ತಮ್ಮ ತಪಸ್ಸಿನಲ್ಲಿ ಕಂಡುಕೊAಡAತಹ ಸರ್ವಾಂರ್ಯಾಮಿ ಶಕ್ತಿಯನ್ನು ವೇದಗಳ ಮೂಲಕ ಪ್ರಕಟಿಸಿದ್ದಾರೆ. ವೇದಗಳು ಮಾನವನ ಜೀವನವನ್ನು ಧರ್ಮಾಚರಣೆÉಯತ್ತ ಕೊಂಡೊಯ್ಯುವ ಮೂಲಕ ಸುಖಪ್ರದಾಯಕವಾಗಿವೆ. ವೇದಗಳು ಸರ್ವರ ಸ್ವತ್ತಾಗಿದ್ದು ವೇದ ಪ್ರಾಮಾಣ್ಯವನ್ನು ಒಪ್ಪಿಕೊಳ್ಳುವವರೆಲ್ಲರೂ ವೈದಿಕರಾಗಬಹುದು ಎಂದು ವೇದಮೂರ್ತಿ ಕೇಕಣಾಜೆ ಕೇಶವ ಭಟ್ಟ ಅಭಿಪ್ರಾಯಪಟ್ಟರು.
ಸಂಪಾಜೆ ಸನಿಹದ ಜೇಡ್ಲ ಗೋಶಾಲೆಯಲ್ಲಿ ಇಂದು ಜರುಗಿದ ರುದ್ರೆöÊಕಾದಶಿನಿ ಹಾಗೂ ಗೋಸೂಕ್ತ ಹವನ ಧಾರ್ಮಿಕ ಕಾರ್ಯಕ್ರಮ ಸಂದರ್ಭ ಅವರು ವೇದಗಳ ಕುರಿತಾಗಿ ಉಪನ್ಯಾಸ ನೀಡಿದರು.
ವೇದವು ಅಪೌರುಷೇಯವೆನಿಸಿದ್ದು ಪವಿತ್ರ ಗ್ರಂಥ ಭಗವದ್ ಗೀತೆಯು ಕೂಡ ವೇದಗಳ ಸಾರವೆನಿಸಿದೆ ಎಂದರು. ವೇದಗಳ ಸಮರ್ಪಕ ಪಠಣದಿಂದ ದೇಹದಲ್ಲಿ ದೈವಿಕ ಕಂಪನವುAಟಾಗುತ್ತದೆ. ವೇದವೆಂದರೆ ಜೀವನ ವಿಧಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರುದ್ರ ಪಠಣದ ಮೂಲಕ ರುದ್ರನು ಶಾಂತನಾದಾಗ ಪಠಿಸುವವರಿಗೆ ಹಾಗೂ ಶ್ರಾವಕರಿಗೆ ಭಗವದನುಗ್ರಹವಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭ ಜೇಡ್ಲ ಗೋಶಾಲೆಯ ಪ್ರಮುಖ ನಿರ್ವಾಹಕರಾದ ಡಾ. ರಾಜಾರಾಂ ಅವರು ಮಾತನಾಡಿ, ಈ ಕೇಂದ್ರದಲ್ಲಿ ಗೋ ಸೇವೆ ಮಾಡುವವರಿಗೆ ಸರ್ವದಾ ಸ್ವ್ವಾಗತವಿದೆ. ಗೋ ಸೇವೆ ಮಾಡುವ ಮೂಲಕ ಪುಣ್ಯ ಸಂಚಯನವಾಗುತ್ತದೆ, ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಆಸಕ್ತರಿಗೆ ಇದೀಗ ವಸತಿ ಸೌಕರ್ಯವನ್ನೂ ಈ ಕೇಂದ್ರದಲ್ಲಿ ಕಲ್ಪಿಸಿರುವುದಾಗಿ ಮಾಹಿತಿಯಿತ್ತರು. ಇಂದಿನ ರುದ್ರ ಪಠಣಕ್ಕೆ ೧೪೮ ಮಂದಿ ರುದ್ರ ಪಠಣ ಪರಿಣಿತರು ಭಾಗವಹಿಸಿದ್ದು ವಿಶೇಷ. ಈ ಎಲ್ಲರೂ ಎರಡು ಆವೃತ್ತಿ ರುದ್ರ ಪÀಠಣದ ಮೂಲಕ ಗೋಶಾಲೆ ಕೆಂದ್ರದಲ್ಲಿ ಧಾರ್ಮಿಕ ಜಾಗೃತಿಯಾಗಿದೆ ಎಂದರು. ಅಲ್ಲದೆ ೭೭ ಮಂದಿ ಮಹಿಳೆಯರು ಲಲಿತಾ ಸಹÀಸ್ರನಾಮ ಪಠಣದೊಂದಿಗೆ ಕುಂಕುಮಾರ್ಚನೆ ನೆರವೇರಿಸಿ ಕೃತಾರ್ಥ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯರಾದ ಮೈಸೂರಿನ ನಾಗರತ್ನಮ್ಮ ಅವರಿಗೆ “ ಜೇಡ್ಲ ಗೋಕುಲ ತಿಲಕ-೨೬” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಮಡಿಕೇರಿಯ ಡಾ. ನಾಗೇಂದ್ರ ಪ್ರಸಾದ್ ಹೊಳ್ಳ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಇಂದು ಈ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಮುಳಿಯ ಕೇಶವ ಪ್ರಸಾದ್, ಮಿತ್ತೂರು ಸಂಸ್ಥಾನದ ಪರವಾಗಿ ಮಿತ್ತೂರು ಈಶ್ವರ ಭಟ್, ವೈಭವ ವೈದಿಕ ತಂಡದ ಪ್ರಮುಖರಾದ ಜಿ. ಆರ್. ರವಿ, ಕೋಟಿ ರುದ್ರ ಸಮಿತಿಯ ರಮೇಶ್ ಹೊಳ್ಳ, ಸಂಪತ್ ಕುಮಾರ್ ಹಾಗೂ ಗೋಸೇವಕರು ಮೊದಲಾದವರನ್ನು ಗೌರÀವಿಸಲಾಯಿತು. ಜೇಡ್ಲದಲ್ಲಿ ಒಂದೆಡೆ ಗೋವುಗಳ ಸಾಕಾಣಿಕೆ ಕೇಂದ್ರ, ಮತ್ತೊಂದೆಡೆ ಮರಗಿಡಗಳ ಪ್ರಕೃತಿ ರಮ್ಯ ವಾತಾವರಣದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಡುವೆ ಹೋಮ- ಹವನ, ಸಾಮೂಹಿಕ ರುದ್ರ- ಚಮಕ ಪಠಣ, ಮಹಿಳೆÉಯರಿಂದ ಲಲಿತಾ ಸಹಸ್ರನಾಮ, ಭಜನಾ ತಂಡದಿAದ ಭಕ್ತಿ ಗಾಯನ ಇಂದು ಪ್ರತಿಧ್ವನಿಸಿತ್ತು. ಆಗಮಿಸಿದ ಮಂದಿಗೆ ಉಪಾಹಾರ ಹಾಗೂ ಭೋಜನ ಪ್ರಸಾದ ಏರ್ಪಡಿಸಲಾಗಿತ್ತು.