ಚೆಟ್ಟಳ್ಳಿ, ಜ. ೪: ಚಿಕ್ಲಿಹೊಳೆ ಜಲಾಶಯದ ಮುಖ್ಯ ಕಾಲುವೆಯಲ್ಲಿ ಅಳಿವಿನ ಅಂಚಿನಲ್ಲಿರುವ ಅಪರೂಪದ ಇಲಿ ಜಿಂಕೆ (ಮೌಸ್ ಡೀರ್) ಸಿಲುಕಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಮೀನುಕೊಲ್ಲಿ ಅರಣ್ಯ ಶಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ರಾತ್ರಿ ಸುಮಾರು ೭ ಗಂಟೆಯ ವೇಳೆಗೆ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ನಾಗರಾಜ್ ಮತ್ತು ಅಪ್ಪÀಸ್ವಾಮಿ ನಾಲೆಗೆ ಇಳಿದು ಅಪಾಯದ ನಡುವೆಯೂ ಇಲಿ ಜಿಂಕೆಯನ್ನು ಸುರಕ್ಷಿತವಾಗಿ ಹೊರ ತೆಗೆದರು. ಅದರ ದೈಹಿಕ ಸ್ಥಿತಿ ಆರೋಗ್ಯಕರವಾಗಿರುವುದು ದೃಢಪಟ್ಟ ನಂತರ ಅದನ್ನು ಮರಳಿ ಕಾಡಿಗೆ ಬಿಡಲಾಯಿತು.ಸಣ್ಣ ಗಾತ್ರದ ಈ ಅಪರೂಪದ ಪ್ರಾಣಿ ಪರಿಸರದ ಸೂಕ್ಷö್ಮ ಸಮತೋಲನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡರಟ್ಟಿ, ಅರಣ್ಯ ವೀಕ್ಷಕರಾದ ಅಪ್ಪಸ್ವಾಮಿ, ಜಗದೀಶ್ ಹಾಗೂ ವಾಹನ ಚಾಲಕ ವಾಸುದೇವ ಭಾಗವಹಿಸಿದ್ದರು. -ಕರುಣ್ ಕಾಳಯ್ಯ