ವೀರಾಜಪೇಟೆ, ಜ. ೪: ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ, ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ೨೦೨೨-೨೫ನೇ ಸಾಲಿನ ಮಹಾಸಭೆ ನಗರದ ಮುತ್ತಪ್ಪ ದೇವಾಲಯದ ಶ್ರೀ ಮುತ್ತಪ್ಪ ಕಲಾ ಮಂಟಪ ಸಭಾಂಗಣದಲ್ಲಿ ಶಾಖೆಯ ಅದ್ಯಕ್ಷ ಟಿ.ಎ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ಎನ್.ಡಿ.ಪಿ. ಜಿಲ್ಲಾ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಯೋಗಂ, ಯೂನಿಯನ್, ಶಾಖೆಯಡಿಯಲ್ಲಿ ಸಂಘಟನೆಯು ಆರಂಭಿಸಲಾಗಿದೆ.
ಸಂಘಟನೆ ೧೦೦ ವರ್ಷಗಳ ಇತಿಹಾಸ ಹೊಂದಿದ್ದು, ರೂಪಿಸಲಾದ ಬೈಲಾ ಕಾನೂನು ಅಡಿಯಲ್ಲಿ ಎಲ್ಲಾ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಸಮಾಜ ಬಾಂಧವರು ಇಂದು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತಿದ್ದು, ಸಮಾಜದಲ್ಲಿ ಗುರುತಿಸು ವಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ರೀ ನಾರಾಯಣ ಗುರು ಅವರು ಹಾಕಿಕೊಟ್ಟ ಸಿದ್ದಾಂತಗಳಿAದ ಎಂದು ಹೇಳಿದರು.
ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಖೆಯ ಕಾರ್ಯದರ್ಶಿ ಟಿ.ಕೆ. ಪದ್ಮನಾಭ ೨೦೨೨-೨೫ನೇ ಸಾಲಿನ ವರದಿ, ಲೆಕ್ಕಪರಿಶೋಧನಾ ವರದಿ ವಾಚಿಸಿದರು.
ಚೆಸ್ಕಾಂ ಸಹಾಯಕ ಅಭಿಯಂತರ ಸೊಮೇಶ್ ಮತ್ತು ಬಿಲ್ಲವ ಸಮಾಜದ ಅಧ್ಯಕ್ಷ ಹಾಗೂ ಗುತ್ತಿಗೆದಾರ ಬಿ.ಎಂ. ಗಣೇಶ್, ೨೦೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಯೂನಿಯನ್ ಉಪಾಧ್ಯಕ್ಷ ಕೆ. ರಾಜನ್, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಗಿರೀಶ್, ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.