ಚೆಟ್ಟಳ್ಳಿ, ಜ. ೪: ನಡುರಾತ್ರಿ ಕಾಡಾನೆಯೊಂದು ಕಣದಲ್ಲಿ ಒಣಗಿಸಿಟ್ಟ ಕಾಫಿಯನ್ನು ಚಲ್ಲಾಪಿಲ್ಲಿಗೊಳಿಸಿದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ ಅವರ ತೋಟದಲ್ಲಿ ಕುಯ್ಲು ಮಾಡಿದ್ದ ಕಾಫಿಯನ್ನು ಕಣದಲ್ಲಿ ಒಣಗಿಸಲಿಟ್ಟು ಟಾರ್ಪಲ್ ಮುಚ್ಚಿಡಲಾಗಿತ್ತು. ಬೆಳಿಗ್ಗೆ ಕಾರ್ಮಿಕರು ನೋಡುವಾಗ ಟಾರ್ಪಲನ್ನು ಹರಿದು ಕಾಫಿಯನ್ನು ಚಲ್ಲಾಪಿಲ್ಲಿಗೊಳಿಸಲಾಗಿತ್ತು.
ಯಾರೋ ಕಳ್ಳರು ಕಾಫಿ ಕಳವು ಮಾಡಿರಬಹುದೆಂದು ಸಂಶಯಗೊAಡು ಪರಿಶೀಲಿಸಿದಾಗ ನಡುರಾತ್ರಿ ಕಾಡಾನೆಯೊಂದು ಕಾಫಿ ಕಣಕ್ಕೆ ಲಗ್ಗೆ ಇಟ್ಟು ಟಾರ್ಪಲನ್ನು ಹರಿದು ಕಾಫಿಯನ್ನು ಚಲ್ಲಾಪಿಲ್ಲಿಗೊಳಿಸಿದಲ್ಲದೆ ಕಾಫಿಯನ್ನು ತಿನ್ನುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಕ್ಯಾಮರಾದ ಸೈರನ್ ಸದ್ದಿಗೆ ಕಾಡಾನೆ ಅಲ್ಲಿಂದ ಪರಾರಿಯಾಗಿತ್ತು. ಅರಣ್ಯ ಇಲಾಖೆ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡದಂತೆ ಹಚ್ಚಿನ ನಿಘಾ ವಹಿಸಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಭಾರತೀಯ ಜನತಾಪಕ್ಷದ ಸೋಮವಾರಪೇಟೆ ತಾಲೂಕು ವಕ್ತಾರ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಒತ್ತಾಯಿಸಿದ್ದಾರೆ.
-ಕರುಣ್ ಕಾಳಯ್ಯ