ಮಡಿಕೇರಿ, ಜ. ೪: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿ. ಬೆಂಗಳೂರು ಹಾಗೂ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಕೊಡವ ಸಮಾಜ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.

ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚೆರುಮಂದAಡ ಜಿ. ಪೊನ್ನಪ್ಪ ಸಹಕಾರ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಲಾಯಿತು. ಬೊಪ್ಪಂಡ ಸರಳ ಕರುಂಬಯ್ಯ ಸಹಕಾರ ಗೀತೆಯನ್ನು ಹಾಡಿದರು.

ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರು ಹಾಗೂ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷ ಕೇಕಡ ಎ. ದೇವಯ್ಯ ಅವರು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸದಸ್ಯರುಗಳು ಸದಸ್ಯತ್ವವನ್ನು ಪಡೆಯುವುದು, ಠೇವಣಿ ಇಡುವುದು, ಸಾಲ ಪಡೆಯುವುದರ ಮೂಲಕ ಸಂಘದೊAದಿಗೆ ನಿರಂತರ ವ್ಯವಹರಿಸಿ ಸಂಘದ ಏಳಿಗೆಗೆ ಸಹಕರಿಸುವಂತೆ ತಿಳಿಸಿದರು. ಸಂಘ ಬೆಳೆಯಲು ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸೇವೆ ಮುಖ್ಯ ಪಾತ್ರವಹಿಸಲಿದೆ ಎಂದರು. ಜಮ್ಮಾ ಜಾಗ ಸಮಸ್ಯೆ ಬಗ್ಗೆ ಕೊಡಗಿನ ಎರಡು ಶಾಸಕರು ಶ್ರಮಿಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಡುವAಡ ಪಿ. ಮುತ್ತಪ್ಪ ಮಾತನಾಡಿ, ೨೦೦೫ನೇ ಇಸವಿಯಲ್ಲಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಸಹಕಾರಿಗಳಾದ ಯಂ.ಸಿ. ನಾಣಯ್ಯ ಅವರ ಸಲಹೆ ಮೇರೆಗೆ ಮಡಿಕೇರಿ ಕೊಡವ ಸಮಾಜದ ಕಟ್ಟಡದಲ್ಲಿ ಪ್ರಾರಂಭಿಸಲಾಗಿ ಇದರ ಆಗಿನ ಅಧ್ಯಕ್ಷ, ಆಡಳಿತ ಮಂಡಳಿ ಹಾಗೂ ಮುಖ್ಯ ಪ್ರವರ್ತಕರುಗಳ ಸಹಯೋಗದಲ್ಲಿ ಸ್ಥಾಪನೆಯಾಗಿತ್ತು. ಪ್ರಸ್ತುತ ಒಂದು ಕೋಟಿ ೧೦ ಲಕ್ಷ ಪಾಲು ಹಣ ಹೊಂದಿದ್ದು, ೮ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಈ ಸಂಸ್ಥೆಯಲ್ಲಿ ಯಾವುದೇ ರೀತಿಯ ಬಂಡವಾಳಶಾಹಿ ಹಾಗೂ ಸರಕಾರದ ಹಸ್ತಕ್ಷೇಪ ಇಲ್ಲದಿರುವುದನ್ನು ಸಭೆಗೆ ತಿಳಿಸಿದರು. ಸಹಕಾರಿಯ ಮೂಲಕ ಠೇವಣಿಗಳ ಸಂಗ್ರಹಣೆ ಹಾಗೂ ಇತರೆ ವ್ಯವಹಾರಗಳ ಮೂಲಕ ಸಂಘ ಅಭಿವೃದ್ಧಿಯಾಗಿದೆ ಎಂದರು. ನಂತರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡವ ಸಮಾಜದ ನಿರ್ದೇಶಕಿ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಕರೆಸ್ಪಾಂಡೆAಟ್ ಕನ್ನಂಡ ಕವಿತ ಬೊಳ್ಳಪ್ಪ ಮಾತನಾಡಿ, ಮಹಿಳೆಯರ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಈ ಸಂಘ ಸಹಕಾರಿಯಾಗಿದೆ. ಮುಂದೆ ಯುವ ಪೀಳಿಗೆ ಸಂಘದ ಸದಸ್ಯತ್ವವನ್ನು ಪಡೆಯುವುದರ ಮೂಲಕ ಪ್ರಯೋಜನ ಪಡೆಯ ಬೇಕೆಂದರು.

ನಿರ್ದೇಶಕಿ ಎಂ.ಜಿ. ಉಷಾ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಘದ ಉಪಾಧ್ಯಕ್ಷ ಕುಡುವಂಡ ಬಿ. ಉತ್ತಪ್ಪ, ನಿರ್ದೇಶಕರುಗಳಾದ ಚೋವಂಡ ಡಿ. ಕಾಳಪ್ಪ, ಕೊಂಗAಡ ಎ. ತಿಮ್ಮಯ್ಯ, ನಂದೇಟಿರ ಪಿ. ರಾಜ ಮಾದಪ್ಪ, ಕೇಕಡ ಎಂ. ಸುಗುಣ, ಮೇದುರ ಪಿ. ಕಾವೇರಪ್ಪ, ಚೆರುಮಂದAಡ ಪೊನ್ನಪ್ಪ, ಕಾಂಡೆರ ಯು.ಕುಟ್ಟಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಸಿ. ನೀಮಾ, ಸಿಬಂದಿಗಳಾದ ಸಿ.ಪಿ. ಗೌತಮ್, ತಸ್ವಿನ್ ಎಂ.ಪಿ., ಮಡಿಕೇರಿ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಶಾಲೆ, ಕೊಡವ ವಿದ್ಯಾನಿಧಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.