ಸ್ಫರ್ದೆ ವಿಜೇತರಿಗೆ ಬಹುಮಾನ

ಮಡಿಕೇರಿ, ಜ. ೫: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೫ ನೇ ಸಾಲಿನ ಅರೆಭಾಷೆ ಕಥೆ ಮತ್ತು ಲಲಿತ ಪ್ರಬಂಧ ಸ್ಫರ್ದೆಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.

ಅರೆಭಾಷೆ ಕಥಾ ಸ್ಪರ್ಧೆಯಲ್ಲಿ ಬೈತಡ್ಕ ಜಾನಕಿ ಬೆಳ್ಯಪ್ಪ ರವರ ‘ಜೀವನ ಬೆಳ್ಕ್ ಕಂಡತ್’(ಪ್ರಥಮ) ಕಾಳೇರಮ್ಮನ ಅಶೋಕ್ ರವರ ‘ಕುಂಙಣ್ಣನು ಸೋಂಪಣ್ಣನು ಹೂಡಿಕೆ ಎತ್ತ್ಗಳ ತಂದ ಕಥೆ’ ಹಾಗೂ ಓಂಶ್ರೀ ದಯಾನಂದ ರವರ ‘ನೆಲ್ಲಿಗುಡ್ಡೆ ಇದ್ ನನ್ನ ಜಾಗೆ’ (ದ್ವಿತೀಯ) ಮತ್ತು ಎಡಿಕೇರಿ ವಿಶ್ವನಾಥ ರವರ ‘ಮಂಜಿ ಮುಸುಕಿದ ದಾರಿನ ನೆನ್ಪುಗ’ (ತೃತೀಯ) ಬಹುಮಾನ ಪಡೆದುಕೊಂಡಿರುತ್ತಾರೆ.

ಅರೆಭಾಷೆ ಲಲಿತ ಪ್ರಬಂಧ ಸ್ಫರ್ಧೆ ವಿಜೇತರ ವಿವರ- ಅರೆಭಾಷೆ ಲಲಿತ ಪ್ರಬಂಧ ಸ್ಪಧೇಯಲ್ಲಿ ಸಂಗೀತ ರವಿರಾಜ್ ರವರ ‘ಭಾಸಣ ಪುರಾಣ’ (ಪ್ರಥಮ) ಲೋಹಿತಾಶ್ವ ಕ್ಯೊಂಗಾಜೆ ರವರ ‘ಜಾಣಿಗಳ ಜಾಲ್’ (ದ್ವಿತೀಯ) ಕುಂಭಗೌಡನ ರಂಜಿತ್ ರವರ ‘ಮಿಂಚು’ ಹಾಗೂ ಕುಕ್ಕನೂರು ರೇಷ್ಮ ಮನೋಜ್ ರವರ ‘ಕಾಲಕ್ಕೆ ತಕ್ಕ ಕೋಲ ಕಟ್ಟೊಕು’ (ತೃತೀಯ) ಪಡೆದುಕೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.