ಮಡಿಕೇರಿ, ಜ. ೫: ಜಮ್ಮಾ ಆಸ್ತಿಯ ಹಕ್ಕು ವರ್ಗಾವಣೆಗೆ ಸಂಬAಧಿಸಿದAತೆ ಜಮ್ಮಾ ತಿದ್ದುಪಡಿ ವಿಧೇಯಕ ಜಾರಿಗೆ ಕಾರಣಕರ್ತರಾದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರನ್ನು ಇಂದು ಭಾಗಮಂಡಲ ನಾಡಿನ ಪ್ರಮುಖರು ಸನ್ಮಾನಿಸಿದರು.
ಶಾಸಕರ ಗೃಹ ಕಚೇರಿಗೆ ತೆರಳಿದ ನಂಗಾರು ಕುಮಾರ, ಬಾರಿಕೆ ಚಂಗಪ್ಪ,ಆಮೆ ಮನೆ ಅನಂತ್ ಕುಮಾರ್,ಕೋಡಿ ಮನೆ ಮನಮೋಹನ್, ನಂಗಾರು ಜಯರಾಮ್, ದಂಡಿನ ಪೂರ್ಣೇಶ್, ಪಳಂಗೋಟು ವಿಶ್ಪ ಪಾಲ, ಕುಯ್ಯಮುಡಿ ಉದಯ, ಬಾರಿಕೆ ಮುತ್ತಪ್ಪ, ಪಳಂಗೋಟು ರತ್ನಾಕರ, ನಂಗಾರು ಲೋಕನಾಥ್, ಹೊಸಗದ್ದೆ ವೆಂಕಟೇಶ್, ಬಾರಿಕೆ ಅರುಣ, ಅಲ್ಲಂಗಡ ತೇಜಸ್, ನಂಗಾರು ರಮೇಶ, ನಂಗಾರು ಕಿರಣ, ನಂಗಾರು ಚರಣ ಇವರುಗಳನ್ನು ಒಳಗೊಂಡ ನಿಯೋಗದಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಪಟ್ಟಡ ರಂಜಿ ಪೂಣಚ್ಚ, ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಾಳಾಡಿರ ಪ್ರತಾಪ್ ಕುಮಾರ್ ಪ್ರಮುಖರಾದ ಸೂದನ ಈರಪ್ಪ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.