ಯಶಸ್ಸು ಕಂಡ ಹೊಸ ಪ್ರಯತ್ನ

ಮಡಿಕೇರಿ, ಜ. ೫: ೨೬ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸುತ್ತಿರುವ ಚೇನಂಡ ಕುಟುಂಬಸ್ಥರು ಇದರ ಅಂಗವಾಗಿ ವಿಶೇಷವಾಗಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ತಂಡಗಳಿಗೆ ಆಯೋಜನೆ ಮಾಡಿದ್ದ ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿ ಯಶಸ್ಸು ಕಂಡಿತು.

ಮೂರ್ನಾಡು ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಜನವರಿ ೧ರಿಂದ ೪ರತನಕ ನಡೆದ ಈ ಪಂದ್ಯಾವಳಿಯಲ್ಲಿ ಒಟ್ಟು ೩೨ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾಟ ನಿನ್ನೆ ಜರುಗಿದ್ದು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕರ ಸ್ಪರ್ಧೆಯಲ್ಲಿ ಕಕ್ಕಬೆಯ ಕೆ.ಸಿ.ಎಸ್ ತಂಡ ವಿಜೇತರಾದರೆ ರವಿ ಇಂಡಿಪೆAಡೆAಟ್ (ಕೊಡವ ಕ್ಯೂಬ್ಸ್) ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ಗೋಣಿಕೊಪ್ಪಲು ಲಯನ್ಸ್ ಶಾಲೆ ಪ್ರಥಮ ಹಾಗೂ ಮಡಿಕೇರಿಯ ಪಿಎಂಶ್ರೀ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.

ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ನಾಪೋಕ್ಲುವಿನ ರಾಮ ಟ್ರಸ್ಟ್ ವಿಜೇತರಾದರೆ ವೀರಾಜಪೇಟೆಯ ಎಫ್.ಎಂ.ಸಿ ಟ್ರಸ್ಟ್ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.

ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಮಡಿಕೇರಿಯ ಸರಕಾರಿ ಪ್ರೌಢಶಾಲೆ ಜಯಗಳಿಸಿದರೆ, ಕೊಡಗು ವಿದ್ಯಾಲಯ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.

ವಿಜೇತರಿಗೆ ಚೇನಂಡ ಕುಟುಂಬದಿAದ ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ಪ್ರದರ್ಶನ ಪಂದ್ಯ

ಫೈನಲ್ ಸಂದರ್ಭ ಕೂಡಿಗೆಯ ಡಿ.ವೈ.ಇ.ಎಸ್ ತಂಡ ಹಾಗೂ ಪೊನ್ನಂಪೇಟೆ ಕ್ರೀಡಾ ಹಾಸ್ಟೆಲ್ ತಂಡದ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ತರಬೇತುದಾರರಾದ ವೆಂಕಟೇಶ್, ಕುಪ್ಪಂಡ ಸುಬ್ಬಯ್ಯ ಹಾಗೂ ಮೂಕಳಮಾಡ ಗಣಪತಿ ಮುಂದಾಳತ್ವದಲ್ಲಿ ಈ ತಂಡದವರು ಉತ್ತಮ ಪ್ರದರ್ಶನ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಒಲಂಪಿಯನ್ ಸಿ.ಎಸ್. ಪೂಣಚ್ಚ, ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವಕುಮಾರ್, ಕಾರ್ಯದರ್ಶಿ ಅಮ್ಮಂಡಿರ ಚೇತನ್, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ನಿವೃತ್ತ ಪ್ರಾಂಶುಪಾಲ ಜಗತ್ ತಿಮ್ಮಯ್ಯ, ಚೇನಂಡ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಈ ಪಂದ್ಯಾವಳಿಯ ಮೂಲಕ ಸುಮಾರು ೩೫ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪಂದ್ಯಾವಳಿ ಸಂದರ್ಭ ಮೂರು ತಂಡಗಳು ಪೂರ್ಣ ತಂಡ ಇಲ್ಲದ್ದರಿಂದ ಸಂಯೋಜನೆಗೊAಡು ಕಣಕ್ಕಿಳಿದಿತ್ತು. ವೀರಾಜಪೇಟೆ ಎಫ್.ಎಂ.ಸಿ ಪರ ೧೦ ಬಾಲಕರೊಂದಿಗೆ ಓರ್ವ ಬಾಲಕಿಯಾಗಿ ಮಾಳೇಟಿರ ನೀಲಮ್ಮ ಆಟವಾಡಿ ಗೋಲು ಬಾರಿಸಿದ್ದು ವಿಶೇಷವಾಗಿತ್ತು. ಆಯೋಜಕರು ಪಂದ್ಯಾವಳಿಗೆ ಆಗಮಿಸಿದ್ದವರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಹಾಕಿ ಕೂರ್ಗ್ ಸಂಸ್ಥೆಯಿAದ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಮೂರ್ನಾಡು ವಿದ್ಯಾಸಂಸ್ಥೆ, ಗ್ರಾಮ ಪಂಚಾಯಿತಿ, ಹಾಕಿ ಕೂರ್ಗ್, ಕೊಡವ ಹಾಕಿ ಅಕಾಡೆಮಿ ಮತ್ತಿತರರ ಸಹಕಾರದಿಂದ ಪಂದ್ಯಾವಳಿ ಯಶಸ್ಸು ಕಂಡಿರುವುದಾಗಿ ಚೇನಂಡ ಕಪ್‌ನ ಪ್ರಮುಖರಾದ ದೀನಾ ಚಂಗಪ್ಪ ಅವರು ತಿಳಿಸಿದ್ದಾರೆ.