ಕೂಡಿಗೆ, ಜ. ೫ : ಕೂಡಿಗೆಯ ಪವಿತ್ರ ತಿರು ಕುಟುಂಬ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ವಾರ್ಷಿಕೋತ್ಸವ ನಡೆಯಿತು. ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ಚಾರ್ಲ್ಸ್ ನೊರೋನ್ಹ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.

ನಂತರ ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮ ಗಳು ನಡೆದು, ಸಂಜೆ ಭವ್ಯ ಮಂಟಪದಲ್ಲಿ ತಿರು ದೇವಾಲಯದ ಯೇಸುವಿನ ವಿಗ್ರಹವನ್ನು ಕುಳ್ಳಿರಿಸಿ ಮೆರವಣಿಗೆ ನಡೆಯಿತು.

ಈ ಸಂದರ್ಭ ಕುಶಾಲನಗರ ತಾಲೂಕು ರೋಮನ್ ಕ್ಯಾಥೋಲಿಕ್ ಅಸೋಸಿ ಯೇಷನ್ ಅಧ್ಯಕ್ಷ ಕೆ.ಎ. ಪೀಟರ್ ಸೇರಿದಂತೆ ಜಿಲ್ಲೆಯ ಕ್ರೆöÊಸ್ತ ಸಮುದಾಯದ ಗುರುಗಳು, ದೇವಾಲಯದ ಪ್ರಮುಖರು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.