ಮಡಿಕೇರಿ, ಜ. ೫: ಕುಶಾಲನಗರ ತಾಲೂಕಿನ ರಂಗಸಮುದ್ರದ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಭೀಮ ಕೋರೆಗಾಂವ್ ವಿಜಯೋತ್ಸವದ ಕಾರ್ಯಕ್ರಮ ನಡೆಯಿತು.
ಪದಾಧಿಕಾರಿ ಜಿ. ಸುನಿಲ್ ಕುಮಾರ್, ಭೀಮ ಕೋರೆಗಾಂವ್ ಯುದ್ಧದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ವಿಜಯಾನಂದ, ಪ್ರಧಾನ ಕಾರ್ಯದರ್ಶಿಯಾದ ನಂದೀಶ್ ಕುಮಾರ್ ಮತ್ತು ಗ್ರಾಮದ ಮುಖಂಡರಾದ ಗಿರೀಶ್, ಸ್ವಾಮಿ, ಪ್ರಭ, ಮಹೇಂದ್ರ ಎಂ.ಎಸ್, ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್ ಜಿ. ದೊಡ್ಡಯ್ಯ, ನಟರಾಜು, ಭಾಸ್ಕರ್ ರಾವ್, ರಾಜೇಶ್, ರಾಜಕುಮಾರ್ ಮೇಟಿ, ಆನಂದ್, ನಿತಿನ್, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.