ಮಡಿಕೇರಿ, ಜ. ೫: ಕೊಡಗು ಜಿಲ್ಲೆಯವರಾಗಿ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿರುವ ಸಿನಿಮಾ ತಾರೆ ಮುಂಡಚಾಡಿರ ರಶ್ಮಿಕಾ ಮಂದಣ್ಣ ತೆರಿಗೆ ಪಾವತಿಯಲ್ಲಿ ಕೊಡಗಿಗೆ ನಂಬರ್ ೧ ಆಗಿ ಹೊರಹೊಮ್ಮಿದ್ದಾರೆ.
ಕನ್ನಡ ಚಿತ್ರರಂಗದಿAದ ಗುರುತಿಸಿಕೊಂಡು ನಂತರದಲ್ಲಿ ತೆಲುಗು ಸೇರಿದಂತೆ ಬಾಲಿವುಡ್ನಲ್ಲಿಯೂ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಉದ್ಯಮದ ಹಣಕಾಸಿನ ವಹಿವಾಟನ್ನು ಕೊಡಗು ಜಿಲ್ಲೆಯ ಮೂಲದ ಸಂಸ್ಥೆಯಾಗಿರುವ ರಶ್ಮಿಕಾ ಮಂದಣ್ಣಾಸ್ ಫರ್ಮ್ ರಶ್ಮಿಕಾ ಮಂದಣ್ಣ ಎಲ್.ಎಲ್.ಪಿ. ಹೆಸರಿನಲ್ಲೇ ಹೊಂದಿದ್ದಾರೆ. ಈ ಮೂಲಕ ಇದೀಗ ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಈತನಕ ಕೊಡಗು ಜಿಲ್ಲೆಯಿಂದ ಅತೀ ಹೆಚ್ಚು ಆದಾಯ ತೆರಿಗೆ ಪಾವತಿದಾರರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಮೂರು ಅವಧಿಯಲ್ಲಿ ತೆರಿಗೆ ಪಾವತಿಯಲ್ಲಿ ಇವರೇ ನಂಬರ್ ೧ ಆಗಿದ್ದು ಮುಂದಿನ ಮಾರ್ಚ್ ತಿಂಗಳ ಅಂತ್ಯದವರೆಗೂ ಇದು ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ. ಪ್ರಸ್ತುತ ರಶ್ಮಿಕಾ ಅವರು ತೆರಿಗೆ ಪಾವತಿಯಲ್ಲಿ ಕೊಡಗು ಜಿಲ್ಲೆಯಿಂದ ಮೊದಲ ಸ್ಥಾನದಲ್ಲಿರುವ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಅವರ ಪೋಷಕರಲ್ಲಿ ತಿಳಿಸಿದ್ದು ಹರ್ಷ ವ್ಯಕ್ತಪಡಿಸಿದೆ.ತೆರಿಗೆ ಪಾವತಿಯಲ್ಲಿ ಜಿಲ್ಲೆಯಿಂದ ಮೊದಲ ಸ್ಥಾನದಲ್ಲಿರುವ ರಶ್ಮಿಕಾ ವಿಕಸಿತ ಭಾರತದ ಬ್ರಾö್ಯಂಡ್ ಅಂಬಾಸಿಡರ್ ಆಗಿಯೂ ಗುರುತಿಸ
ಲ್ಪಡಲಿದ್ದಾರೆ. - ಶಶಿ