ಗೋಣಿಕೊಪ್ಪಲು, ಜ.೫: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಕ್ಕೆಸೊಡ್ಲೂರು ಗ್ರಾಮ ನಿವಾಸಿ ಸುಳ್ಳಿಮಾಡ ಭಜನ್ ದೇವಯ್ಯ (೨೭) ಮೃತಪಟ್ಟ ದುರ್ದೈವಿ. ಭಾನುವಾರ ರಾತ್ರಿ ೮.೩೦ರ ಸುಮಾರಿಗೆ ಬೈಕ್ ಸವಾರ ಸುಳ್ಳಿಮಾಡ ಭಜನ್ ದೇವಯ್ಯ ಕೇರಳದಲ್ಲಿ ನಡೆದಿದ್ದ ಕೊಡಗು ರೈಡರ್ಸ್ ಕ್ಲಬ್ ಯಾತ್ರೆಯಲ್ಲಿ ಪಾಲ್ಗೊಂಡು ಕೊಡಗಿನತ್ತ ವಾಪಸ್ಸಾಗುತ್ತಿದ್ದರು. ಈ ವೇಳೆ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಸಮೀಪ ಕಾರೊಂದನ್ನು ಓವರ್‌ಟೇಕ್ ಮಾಡಿ ಮುನ್ನುಗ್ಗುತ್ತಿದ್ದಾಗ ಮುಂಭಾಗದಿAದ ಬಂದ ಲಾರಿಗೆ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಇದರಿಂದ ಗಂಭೀರ ಗಾಯಗೊಂಡ ಬೈಕ್ ಸವಾರ ಭಜನ್ ದೇವಯ್ಯ ಅವರನ್ನು ಕೂಡಲೇ ಗೋಣಿಕೊಪ್ಪಲು ಲೋಪಮುದ್ರಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆಸ್ಪತ್ರೆಯಲ್ಲಿ ನಡುರಾತ್ರಿ

ಕೊನೆಯುಸಿರೆಳೆದಿದ್ದಾರೆ. ಅವಿವಾಹಿತನಾಗಿರುವ ಭಜನ್ ದೇವಯ್ಯ ಇಬ್ಬರು ಸಹೋದರಿಯರನ್ನು ಹೊಂದಿದ್ದಾರೆ. ಕಳೆದ ೩ ವರ್ಷಗಳ ಹಿಂದೆ ಅಪಘಾತದಲ್ಲಿ ತಾಯಿ ಹಾಗೂ ತಂದೆಯೂ ಮೃತಪಟ್ಟಿದ್ದರು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರೆದ ಶಾಸಕ

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ದ.ಕೊಡಗಿನ ವಿವಿಧ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಸಿ ವೀರಾಜಪೇಟೆಯ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಗೃಹ ಕಚೇರಿಗೆ ರಾತ್ರಿ ತಮ್ಮ ವಾಹನದೊಂದಿಗೆ ತೆರಳುತ್ತಿದ್ದ ಸಂದರ್ಭ ಬೈಕ್ ಅಪಘಾತವನ್ನು ಗಮನಿಸಿ, ಅಪಘಾತಕ್ಕೀಡಾದ ಭಜನ್ ದೇವಯ್ಯ ಅವರನ್ನು ಚಿಕಿತ್ಸೆಗಾಗಿ ತಮ್ಮ ಬೆಂಗಾವಲಿನ ವಾಹನವನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದರು.