ಶ್ರೀಮಂಗಲ, ಜ. ೫: ಶ್ರೀಮಂಗಲ ಪದವಿಪೂರ್ವ ಮತ್ತು ಪ್ರೌಢಶಾಲೆ ಸಂಯುಕ್ತ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಎಲ್ಲಾ ವಿದ್ಯಾರ್ಥಿಗಳಿಗೂ, ಸಾರ್ವಜನಿಕರಿಗೂ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿಕ ಡಿ.ಪಿ. ಪ್ರಸಕ್ತ ಸಾಲಿನ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಹುಮಾನ ದತ್ತಿನಿಧಿ ಬಹುಮಾನಗಳನ್ನು ಮತ್ತು ಅಂತರ ಶಾಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಪ್ರಧಾನ ಮಾಡಲಾಯಿತು.

ವರ್ಷದ ಅತ್ಯುತ್ತಮ ವಿದ್ಯಾರ್ಥಿಯಾಗಿ ಪ್ರೌಢಶಾಲೆಯಿಂದ ಶೋಭಾ ಹಾಗೂ ಕಾಲೇಜು ವಿಭಾಗದಿಂದ ಪ್ರತಿಕ ಬಹುಮಾನವನ್ನು ಪಡೆದುಕೊಂಡರು. ಈ ಸಾಲಿನಲ್ಲಿ ಈ ವಿದ್ಯಾಸಂಸ್ಥೆಯಿAದ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ ೨೩ ವಿದ್ಯಾರ್ಥಿಗಳಿಗೆ ವಿಶೇಷ ಪಾರಿತೋಷಕವನ್ನು ನೀಡಿ ಸನ್ಮಾನಿಸಲಾಯಿತು. ಸಮಾರೋಪ ಭಾಷಣ ಮಾಡಿದ ಚೊಟ್ಟೆಯಂಡಮಾಡ ಎಸ್. ಚಂಗಪ್ಪ ಅವರು ಮಾತೆಂಬದು ಜ್ಯೋತಿರ್ಲಿಂಗ, ಮಾತು ಮಿತ ವಿರಲಿ. ಪ್ರತಿ ಹೆಜ್ಜೆಯಲ್ಲಿ ಮಾನವೀಯತೆ ರೂಢಿಸಿಕೊಂಡು ಸತ್ಪçಜೆಗಳಾಗಿ ಎಂದು ಕರೆ ನೀಡಿದರು. ಸಂಸ್ಥೆಯ ಅಭಿವೃದ್ಧಿಗೆ ಐವತ್ತು ಸಾವಿರ ರೂಪಾಯಿ ಹಾಗೂ ಪ್ರತಿ ವರ್ಷ ೮ನೇ ೯ನೇ ಮತ್ತು ೧೦ನೇ ತರಗತಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ೧೦ ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬೋಡಂಗಡ ಅಯ್ಯಪ್ಪ ಅವರು ೨೦೨೭-೨೮ನೇ ಸಾಲಿಗೆ ಈ ಸಂಸ್ಥೆಗೆ ೭೫ ವರ್ಷ ತುಂಬುತ್ತಿದೆ, ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲಾ ಪೋಷಕರು ಸಾರ್ವಜನಿಕರು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ತನು, ಮನ, ಧನವನ್ನು ಸಮರ್ಪಿಸಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಲು ಮನವಿ ಮಾಡಿದರು.

ಸಮಾರಂಭದಲ್ಲಿ ಮಂಡಳಿಯ ಕಾರ್ಯದರ್ಶಿ ಕಾಳಿಮಾಡ ಬೆಳ್ಳಿಯಪ್ಪ ಖಜಾಂಚಿ ಎಸ್.ಎಂ. ವಿನಯ್, ನಿರ್ದೇಶಕರಾದ ಬಾಚಂಗಡ ಕಾರ್ಯಪ್ಪ, ಅಣ್ಣಳಮಾಡ ನರೇಂದ್ರ, ಅಜ್ಜಮಾಡ ಸಾವಿತ್ರಿ, ದೇಕಮಾಡ ನವೀನ್, ಹಿರಿಯ ಶಿಕ್ಷಕಿ ಹೆಚ್.ಬಿ. ರತ್ನಮ್ಮ ಹಾಜರಿದ್ದರು.

ಶಿಕ್ಷಕ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಸುಜಾತ ವಂದಿಸಿದರು.