ಮಡಿಕೇರಿ, ಜ .೬: ಜಮ್ಮಾ ಬಾಣೆಯ ಮಾಲೀಕತ್ವ, ಕಂದಾಯ ನಿಗದಿ ಕುರಿತಂತೆ ಇದ್ದ ಸಮಸ್ಯೆಗೆ ೨೦೨೪ರಲ್ಲಿಯೇ ಶಾಶ್ವತ ಪರಿಹಾರ ದೊರಕಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರಕಾರದ ಸುತ್ತೋಲೆಯಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ಜಿಲ್ಲೆಯ ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು; ಜಮ್ಮಾ ಸಮಸ್ಯೆ ಇಂದು ನಿನ್ನೆಯದಲ್ಲ, ಬಹಳ ಹಿಂದಿನದ್ದು, ಆದರೆ ಅದು ಗಂಭೀರತೆ ಪಡೆದುಕೊಂಡಿದ್ದು ೧೯೮೩ರಲ್ಲಿ ಚಕ್ಕೇರ ಪೂವಯ್ಯ ಅವರು ನ್ಯಾಯಾಲಯದಲ್ಲಿ ಜಮ್ಮಾ ಮಾಲೀಕತ್ವ ಹಾಗೂ ಇತರ ವಿಚಾರಗಳ ಕುರಿತಾಗಿ ಅರ್ಜಿ ಸಲ್ಲಿಸಿದ ಬಳಿಕ. ಆ ಪ್ರಕರಣದಲ್ಲೂ ಕೂಡ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಜಮ್ಮಾ ಬಾಣೆಗೆ ಮಾಲೀಕರು ಯಾರೂ ಇಲ್ಲ, ಹಿಡುವಳಿದಾರರಿಗೆ ಸೊಪ್ಪು, ಕಟ್ಟಿಗೆ, ಸ್ವಂತ ಉಪಯೋಗಕ್ಕೆ ಮನೆ ಕಟ್ಟಲು ಮರಗಳನ್ನು ಬಳಸಿಕೊಳ್ಳಬಹುದೆಂದು ಕೆಲವೊಂದು ನಿಯಮಿತ ಅವಕಾಶಗಳನ್ನು ಮಾತ್ರ ನೀಡಿತ್ತು. ಈ ಬಗ್ಗೆ ೧೯೮೩ರಲ್ಲಿಯೇ ಜಮ್ಮಾ ಬಾಣೆ ಹಾಗೂ ಜಾಗ ಸರಕಾರದ ಜಾಗವೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿದೆ. ಆದರೂ ಅಂದು ಆಡಳಿತದಲ್ಲಿದ್ದವರು ತಲೆ ಕೆಡಿಸಿಕೊಂಡಿಲ್ಲವೆAದು ಹೇಳಿದರು.

ಇದಾದ ಬಳಿಕ ೩೧-೧೯-೨೦೦೬ರಂದು ಅಂದಿನ ಕಂದಾಯ ಕಾರ್ಯದರ್ಶಿ ಜಾಮ್‌ದಾರ್ ಅವರು, ಪೂವಯ್ಯ ಅವರ ಪ್ರಕರಣವನ್ನು ಉಲ್ಲೇಖಿಸಿ ಜಮ್ಮಾ ಬಾಣೆ, ಜಾಗ ಹೊಂದಿರುವವರು ಒಡೆಯರಾಗಲು ಸಾಧ್ಯವಿಲ್ಲ, ಸೀಮಿತ ವಿಶೇಷ ಅಧಿಕಾರ ಮಾತ್ರ ನೀಡಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದರು. ಇದು ಜನತೆಗೆ ತೊಂದರೆ ಕೊಡುವ ಸಲುವಾಗಿಯೇ ಹೊರಡಿಸಿದ್ದ ಸುತ್ತೋಲೆಯಾಗಿತ್ತು. ಈ ಸಂದರ್ಭದಲ್ಲಿ ಶಾಸಕರುಗಳಾಗಿದ್ದ ತಾವು ಹಾಗೂ ಅಪ್ಪಚ್ಚು ರಂಜನ್ ಸೇರಿ ಇದು ಜಿಲ್ಲೆಯ ಸಮಸ್ಯೆ ಎಂದು ಪರಿಗಣಿಸಿ ಇದನ್ನು ವಿರೋಧಿಸಿ ಅಂದು ಹೋರಾಟ ಸಮಿತಿಯನ್ನು ರಚಿಸಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ ಅವರ ಮುಂದಾಳತ್ವದಲ್ಲಿ ಜಾತ್ಯತೀತವಾಗಿ ಎಲ್ಲ ನಾಯಕರುಗಳನ್ನು ಒಗ್ಗೂಡಿಸಿ ಹೋರಾಟ ಹಮ್ಮಿಕೊಳ್ಳಲಾಯಿತು. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಾಯಿತು. ಆದರೂ ಏನೂ ಪ್ರಯೋಜನವಾಗಿಲ್ಲ ಎಂದರು.

ಸುತ್ತೋಲೆ ಹಿಂತೆಗೆತ

ನAತರದಲ್ಲಿ ೨೦೦೭-೦೮ರಲ್ಲಿ ಚುನಾವಣೆ ಬಂದಾಗ ಬಿಜೆಪಿ ಅಧಿಕಾರಕ್ಕೆ ಬಂದರೆ ಜನವಿರೋಧಿ ಸುತ್ತೋಲೆಯನ್ನು ಹಿಂತೆಗೆಯುವದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಿತು. ಒಂದು ತಿಂಗಳೊಳಗಾಗಿ ಸುತ್ತೋಲೆ ಹಿಂಪಡೆಯಲಾಯಿತೆAದು ಬೋಪಯ್ಯ ತಿಳಿಸಿದರು.

ತಿದ್ದುಪಡಿಗೆ ಅಂಗೀಕಾರ

ಡಿ.ವಿ.ಸದಾನAದ ಗೌಡ ಮುಖ್ಯಮಂತ್ರಿಯಾಗಿದ್ದ ಆ ಸಂದರ್ಭದಲ್ಲಿ ತಾವು ವಿಧಾನ ಸಭಾಧ್ಯಕ್ಷರಾಗಿದ್ದಾಗ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರಮುಖರ ಸಭೆ ಕರೆದು ಚರ್ಚೆ ಮಾಡಿ ಜಮ್ಮಾ ಮಾಲೀಕತ್ವ ಹಾಗೂ ಕಂದಾಯ ನಿಗದಿಪಡಿಸುವ ಸಂಬAಧ ತಿದ್ದುಪಡಿ ಮಾಡುವಂತೆ ಸದನದಲ್ಲಿ ಮಂಡಿಸಲಾಯಿತು. ತಾವೂ ಹಾಗೂ ಅಪ್ಪಚ್ಚು ರಂಜನ್ ಚರ್ಚೆ ಮಾಡಿ ತಿದ್ದುಪಡಿ ಅಂಗೀಕಾರಕ್ಕಾಗಿ ಸದನದಲ್ಲಿ ಧರಣಿ ಮಾಡಿದ್ದಲ್ಲದೆ ರಾಜೀನಾಮೆ ನೀಡುವದಾಗಿ ತೀರ್ಮಾನ ಪ್ರಕಟಿಸಿದೆವು. ಈ ಸಂದರ್ಭದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯ ಅವರು ಕೂಡ ಅಂಗೀಕಾರಕ್ಕೆ ಸಹಮತ ನೀಡಿದ್ದರು. ಹಾಗಾಗಿ ೧೬-೧೨-೨೦೧೧ರಂದು ವಿಧಾನ ಸಭೆ ಹಾಗೂ ಪರಿಷತ್‌ನಲ್ಲೂ ತಿದ್ದುಪಡಿ ಮಸೂದೆಗೆ ಅಂಗಿಕಾರ ದೊರೆತು ತಕ್ಷಣ ರಾಜ್ಯಪಾಲರಿಗೆ ಕಳುಹಿಸಲಾಯಿತೆಂದು ತಿಳಿಸಿದರು.

ರಾಷ್ಟçಪತಿಗಳಿಂದ ಅಂಗೀಕಾರ

ಸದಸನದಲ್ಲಿ ಅಂಗೀಕಾರಗೊAಡು ಅಂದಿನ ರಾಜ್ಯಪಾಲರಾಗಿದ್ದ ಹೆಚ್.ಆರ್.ಭಾರಧ್ವಾಜ್ ಅವರಿಗೆ ಅಂತಿಮ ಸಹಿಗಾಗಿ ಕಳುಹಿಸಿಕೊಟ್ಟ ಸಂದರ್ಭ ಒಂದು ಪಕ್ಷದ ಕೆಲವರು ಹಾಗೂ ಇತರರು ತಿದ್ದುಪಡಿ ಮಾಡಿದರೆ ಕೊಡವರ ಸಂಸ್ಕೃತಿ, ಮೂಲ ಪದ್ಧತಿಗಳಿಗೆ ಧಕ್ಕೆಯಾಗಲಿದೆ. ಹಾಗಾಗಿ ಒಪ್ಪಿಗೆ ನೀಡಬಾರದೇಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂದು ಕಾಂಗ್ರೆಸ್ ಆಡಳಿದಲ್ಲಿದ್ದ ಕೇಂದ್ರ ಸರಕಾರ ಅದನ್ನು ರಾಷ್ಟçಪತಿಗಳಿಗೆ ಕಳುಹಿಸಿಕೊಡಲಾಯಿತು. ಅಂದು ರಾಷ್ಟçಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರು ೨೦೧೨ರಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧ ಉದ್ಘಾಟನೆಗೆ ಬಂದಿದ್ದ ಸಂದರ್ಭ ಮಾತುಕತೆ ನಡೆಸಿ ಸಮಸ್ಯೆ ಬಗ್ಗೆ ವಿವರಣೆ ಪಡೆದುಕೊಂಡು ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಕಂದಾಯ ಇಲಾಖೆಗೆ ಸೂಚಿಸಿದರು. ಹಾಗಾಗಿ ೨೨.೧.೨೦೧೩ರಲ್ಲಿ ತಿದ್ದಪಡಿ ಮಸೂದೆಗೆ ಅಂಗೀಕಾರ ದೊರೆತು ೧.೨.೨೦೧೩ರಲ್ಲಿ ರಾಜ್ಯಪತ್ರದಲ್ಲಿ ಆದೇಶ ಹೊರಬಿದ್ದಿತು ಎಂದು ಮಾಹಿತಿ ನೀಡಿದರು.

ಮತ್ತೆ ಆಕ್ಷೇಪ

ಇದಾದ ಬಳಿಕ ಒಂದು ಪಕ್ಷದ ಪ್ರಮುಖರನ್ನೊಳಗೊಂಡ ೪೩ ಮಂದಿ ಸ್ಥಳೀಯರು ನಾಲ್ಕು ಅರ್ಜಿ, ಮತ್ತೆ ೩೭ ಮಂದಿಯನ್ನೊಳಗೊAಡ ಕೆಲವರು ಹಾಗೂ ಮತ್ತೆ ಎರಡು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿ ತಿದ್ದುಪಡಿ ಬಗ್ಗೆ ಪ್ರಶ್ನೆ ಮಾಡಿದ್ದರು. ತಿದ್ದುಪಡಿ ಸಂವಿಧಾನ ವಿರೋಧಿಯಾಗಿದ್ದು ಇದನ್ನು ಜಾರಿಗೆ ತರದಂತೆ ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಬೇಕು. ಜಂಟಿ ಖಾತೆಗಳನ್ನು ಪಾಲುದಾರಿಕೆ ಮಾಡಬಾರದು, ಸಾಲ ಹೊಂದಲು ಅವಕಾಶ ಮಾಡಿಕೊಡಬಾರದು, ಮಾಲೀಕರನ್ನು ಪಾಲುದಾರರು ಎಂದು ಪರಿಗಣಿಸಬೇಕು ಮುಂತಾದ ಹಲವು ಅಂಶಗಳನ್ನು ಒಳಗೊಂಡ ರಿಟ್ ಅರ್ಜಿ ಸಲ್ಲಿದ್ದರು. ಈ ಬಗ್ಗೆ ಪರಿಶೀಲಿಸಿದ ಅಂದಿನ ನ್ಯಾಯಮೂರ್ತಿ ಸೂರಜ್ ಗೋಯಲ್ ಅವರು ಒಟ್ಟು ಏಳು ಅಂಶಗಳನ್ನು ಉಲ್ಲೇಖಿಸಿ ರಿಟ್ ಅರ್ಜಿಯಲ್ಲಿ ಯಾವದೇ ಅರ್ಥವಿಲ್ಲ, ಜಮ್ಮಾ ಬಾಣೆಗೆ ಕಂದಾಯ ಕಾಯ್ದೆ ಅನ್ವಯವಾಗುತ್ತದೆ, ಹಿಡುವಳಿದಾರರಿಗೆ ಮಾಲೀಕತ್ವದ ಹಕ್ಕು ಇದೆ, ಪಾಲುದಾರಿಕೆ ಸಂಬAಧ ಹಿಂದೂ ಕಾನೂನಂತೆ ಅವಕಾಶವಿದೆ, ಐನ್‌ಮನೆ, ಸ್ಮಶಾನ, ಕಾರೋಣಗಳ ಗುಡಿಗಳಿದ್ದರೆ ಅವಗಳನ್ನು ಜಂಟಿಯಾಗಿ ಇಟ್ಟುಕೊಳ್ಳಬಹುದು ಅಥವಾ ಬಿಡಲೂಬಹುದು ಎಂದು ಉಲ್ಲೇಖಿಸಿ ಅರ್ಜಿಗಳನ್ನು ವಜಾಗೊಳಿಸಿ ತಿದ್ದುಪಡಿ ಮಸೂದೆಯನ್ನು ಎತ್ತಿ ಹಿಡಿದು ೨೫-೭-೨೦೨೪ರಂದೇ ತೀರ್ಪು ನೀಡಿದ್ದಾರೆ. ೩೦ ದಿವಸಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆಯೂ ಸೂಚಿಸಿದ್ದಾರೆ ಎಂದು ಬೋಪಯ್ಯ ಮಾಹಿತಿ ನೀಡಿದರು.

ಪೌತಿ ಖಾತೆ ಆಂದೋಲನ

ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಖಾತೆ/ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ವರ್ಗಾವಣೆ ಆಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನ ಹೊಂದಿದ್ದರೂ ಜಮೀನು ಅಭವೃದ್ಧಿಪಡಿಸಲು ಸಾಲ ಸೌಕರ್ಯಗಳನ್ನು ಹೊಂದಿಕೊಳ್ಳಲು ಸಾಧ್ಯವಾಗುವದಿಲ್ಲ ಎಂಬ ನಿಟ್ಟಿನಲ್ಲಿ ಮ್ಯೂಟೇಶನ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಪೌತಿ ಖಾತೆ ಆಂದೋಲನ ಪ್ರಾರಂಭಿಸಲಾಗಿತ್ತು. ೧೭-೧೦-೨೦೨೦ರಿಂದಲೇ ಈ ಪ್ರಕ್ರಿಯೆ ಆರಂಭಗೊAಡು ಕೆಲಸಗಳಾಗುತ್ತಲಿದ್ದವು. ರೈತಾಪಿ ವರ್ಗದವರಿಗೂ ಇದರಿಂದ ಅನುಕೂಲವಾಗಿತ್ತಿತ್ತು. ನಂತರದಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೋಪಯ್ಯ ಆರೋಪಿಸಿದರು.

ಸುತ್ತೋಲೆಯಿಂದ ಸಮಸ್ಯೆ

ಪೌತಿ ಖಾತೆ, ಜಾಗ ವರ್ಗಾವಣೆಗೆ ಸಂಬAಧಿಸಿದAತೆ ೩೧.೧.೨೦೨೪ರಲ್ಲಿ ಈಗಿನ ಸರಕಾರ ಹೊರಡಿಸಿರುವ ಸುತ್ತೋಲೆಯಿಂದಾಗಿ ಮತ್ತೆ ಸಮಸ್ಯೆ ಎದುರಾಗಿದೆ. ನೋಂದಣಿಯಾಗದ ಜಾಗದ ವಿಭಾಗ ಪತ್ರಗಳನ್ನು ಕೂಡ ವರ್ಗಾವಣೆ ಮಾಡುತ್ತಿರುವದು ಕಂಡುಬರುತ್ತಿದೆ. ಇದರಿಂದ ವಿವಾದಾತ್ಮಕ ಪ್ರಕರಣಗಳು ಹೆಚ್ಚುತ್ತಿರುವದು ಕಂಡು ಬರುತ್ತಿದೆ. ಅಲ್ಲದೆ ನೋಂದಣಿ ಶುಲ್ಕ ಪಾವತಿಯಾಗದೆ ಇರುವದರಿಂದ ಸರಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಾಗಾಗಿ ನೋಂದಾಯಿತವಲ್ಲದ ವಿಭಾಗ ಪತ್ರಗಳನ್ನು ವರ್ಗಾವಣೆ ಮಾಡಬಾರದು ಎಂದು ಎಲ್ಲ ತಹಶೀಲ್ದಾರರುಗಳಿಗೆ ಸೂಚನೆ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಯಿಂದಾಗಿ ರೈತಾಪಿ ವರ್ಗದವರಿಗೆ ತೊಂದರೆ ಉಂಟಾಗಿದೆ ಎಂದು ಬೋಪಯ್ಯ ತಿಳಿಸಿದರು.

ಗೊಂದಲದಲ್ಲಿಡುವದು ಬೇಡ

ಕಂದಾಯ ಮಸೂದೆ ತಿದ್ದುಪಡಿಯಾಗಿ ನ್ಯಾಯಾಲಯದ ಆದೇಶವಿದ್ದರೂ ಜಾರಿಗೆ ತಂದಿಲ್ಲ, ನ್ಯಾಯಾಲಯ ಹೇಳಿದಂತೆ ೩೦ ದಿನಗಳಲ್ಲಿ ಪ್ರಕ್ರಿಯೆ ಜಾರಿಗೊಳಿಸದೆ ಇದೀಗ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ ಎಂದು ಜನರನ್ನು ಗೊಂದಲದಲ್ಲಿಡುವ ಕೆಲಸ ಬೇಡ. ಈ ಹಿಂದೆಯೇ ಶಾಶ್ವತ ಪರಿಹಾರವಾಗಿದೆ. ಎಲ್ಲ ಜನತೆಯ ಪರವಾಗಿ ಹೋರಾಟ ಮಾಡಿ ಪರಿಹಾರ ಮಾಡಿದ್ದೇವೆ. ಅವರ ತಿದ್ದುಪಡಿ ಪ್ರಯತ್ನವನ್ನು ಟೀಕಿಸುವದಿಲ್ಲ, ತಿದ್ದುಪಡಿಯಲ್ಲಿ ಲೋಪವಿದ್ದುದನ್ನು ತಾನೇ ಸ್ವತಃ ಶಾಸಕರ ಗಮನಕ್ಕೆ ತಂದ ಬಳಿಕ ಅವರು ಸಮಿತಿಯ ಗಮನಕ್ಕೆ ತಂದು ಸರಿ ಮಾಡಿಸಿದ್ದಾರೆ ಎಂದು ಬೋಪಯ್ಯ ಹೇಳಿದರು.

ಸುತ್ತೋಲೆ ಹಿಂಪಡೆಯಲಿ

ಪೌತಿ ಖಾತೆ ಹಾಗೂ ವಿಭಾಗ ಪತ್ರ ವರ್ಗಾವಣೆಗೆ ಸಂಬAಧಿಸಿದAತೆ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ಕೂಡಲೇ ಸುತ್ತೋಲೆಯನ್ನು ಹಿಂಪಡೆಯಬೇಕು. ನೋಂದಾವಣೆಯಾಗದಿದ್ದರೂ ಹಿಂದೂ ಕಾನೂನು ಸೆ.೫೬ರಡಿಯ ಸೂಚನೆಗಳಂತೆ ವರ್ಗಾವಣೆ ಮಾಡಬೇಕು. ಸರಕಾರ ಬಿಟ್ಟಿ ಭಾಗ್ಯಗಳಿಗೆ ಹಣವಿಲ್ಲದೆ ಈ ರೀತಿ ಸುತ್ತೋಲೆಗಳನ್ನು ಹೊರಡಿಸಿ ಜನರ ಮೇಲೆ ಹೊರೆ ಹಾಕುತಿದೆ ಎಂದು ಆರೋಪಿಸಿದರು.

ಲಾಭ ಪಡೆಯುವ ಉದ್ದೇಶ

ಅಪ್ಪಚ್ಚು ರಂಜನ್ ಅವರು ಮಾತನಾಡಿ; ತಿದ್ದುಪಡಿ ಮಾಡಿದ್ದೇವೆ ಎಂದು ಪರಿಸ್ಥಿತಿಯ, ರಾಜಕೀಯ ಲಾಭ ಪಡೆಯುವ ಉದ್ದೇಶ ಇದಾಗಿದೆ. ನಮ್ಮ ಸರಕಾರವಿದ್ದಾಗ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿರುವ, ಚರ್ಚೆ ಆಗಿರುವ ಬಗ್ಗೆ, ಸಿದ್ಧರಾಮಯ್ಯ, ಕೆ.ಜೆ.ಜಾರ್ಜ್ ಅವರುಗಳು ಸಹಕಾರ ನೀಡಿರುವ ಬಗ್ಗೆ ದಾಖಲೆ ಕೂಡ ಇದೆ. ಶೇ.೯೯ರಷ್ಟು ಪರಿಹಾರ ಮಾಡಿದ್ದೇವೆ. ಇದೀಗ ನಾನೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುವ ರಾಜಕಾರಣ ಆಗುತ್ತಿದೆ ಎಂದು ಆರೋಪಿಸಿದರು. ಭಾಗ್ಯಗಳ ಸಂಪನ್ಮೂಲಕ್ಕೋಸ್ಕರ ಸುತ್ತೋಲೆಗಳನ್ನು ಹೊರಡಿಸಲಾಗುತ್ತಿದ್ದು, ಛಾಪಾ ಕಾಗದ, ನೋಂದಣಿ ಶುಲ್ಕ ಎಲ್ಲವನ್ನೂ ಹೆಚ್ಚಿಸಿ ಹಣಕ್ಕಾಗಿ ಬಡವರ ಮೇಲೆ ಬರೆ ಎಳೆಯಲಾಗುತ್ತಿದೆ ಎಂದು ಹೇಳಿದರು.

ವಿಧೇಯಕ ಮಂಡಿಸುವಾಗ ಪಟ್ಟೆದಾರರನ್ನು ಏಜೆಂಟ್ ಎಂದು ಸಂಬೋಧಿಸಿರುವದು ಅಪಮಾನ ಮಾಡಿದಂತೆ, ಪಟ್ಟೆದಾರರು ನಮ್ಮ ಗೌರವ ಎಂದು ರಂಜನ್ ಅಭಿಪ್ರಾಯಪಟ್ಟರು.

ಸ್ಪಷ್ಟತೆ ಇಲ್ಲ

ಸರಕಾರಿ ಅಭಿಯೋಜಕರಾಗಿದ್ದ, ವಕೀಲ ಕವೀಂದ್ರ ಮಾತನಾಡಿ; ಈಗ ಹೊರಡಿಸಿರುವ ವಿಧೇಯಕದಲ್ಲಿ ಯಾವದೇ ಸ್ಪಷ್ಟತೆ ಇಲ್ಲ, ಪಟ್ಟೆದಾರರ ಹೆಸರು ತೆಗೆಯುವಲ್ಲಿ, ಕಂದಾಯ ನಿಗದಿ ಮಾಡುವ ಬಗ್ಗೆ, ತಹಶೀಲ್ದಾರರಿಗೆ ನೀಡಿರುವ ಅಧಿಕಾರದಲ್ಲಿಯೂ ಯಾವದೇ ಸ್ಪಷ್ಟತೆ ಇಲ್ಲ. ಇದರಿಂದಾಗಿ ಮತ್ತೆ ತಕರಾರು, ವ್ಯಾಜ್ಯಗಳು ಹೆಚ್ಚಾಗಲಿವೆ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ, ಪ್ರಕರಣ ಪರಿಹಾರ ಕಾಣಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.