ಮಡಿಕೇರಿ, ಜ. ೬: ಪಾಲೂರು ಗ್ರಾಮದ ಕೊಡವಾಮೆ ಕೂಟದ ವಾರ್ಷಿಕ ಊರೊರ್ಮೆ ಕಾರ್ಯಕ್ರಮ ಪಾಲೂರಿನಲ್ಲಿ ಸಂಭ್ರಮದಿAದ ನಡೆಯಿತು. ೨೦ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಮಂದನೆರವAಡ, ನೆರವಂಡ, ಚೆರುವಾಳಂಡ, ಮೇಪಾಡಂಡ, ಪೊದುವಡ, ಪೈಕೆರ, ಬೊಳ್ಳಿಯಂಡ, ಬಲ್ಲಂಡ, ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷರಾದ ಮಂದನೆರವAಡ ಹರೀಶ್ ಸೋಮಯ್ಯ ಕೊಡವ ಸಂಸ್ಕೃತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಂತರರಾಷ್ಟಿçÃಯ ಮಾಸ್ಟರ್ ಅಥ್ಲೆಟಿಕ್ ಪಟು ಮುಲ್ಲೆರ ಪೊನ್ನಮ್ಮ ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು ಮತ್ತು ಕೊಡವ ಪದ್ಧತಿಯನ್ನು ಅರಿತುಕೊಳ್ಳಬೇಕು ಹಾಗೂ ಮಕ್ಕಳು ಓದಿನೊಂದಿಗೆ ಕ್ರೀಡೆಯಲ್ಲೂ ಆಸಕ್ತಿ ವಹಿಸಬೇಕು ಎಂದರು.

ಸನ್ಮಾನ : ಕಾರ್ಯಕ್ರಮದಲ್ಲಿ ಅಂತರರಾಷ್ಟಿçÃಯ ಮಾಸ್ಟರ್ ಅಥ್ಲೆಟ್ ಮುಲ್ಲೆರ ಪೋನ್ನಮ್ಮ, ಮಾಜಿ ಅರಣ್ಯ ಇಲಾಖೆ ಅಧಿಕಾರಿ ಮೇಪಾಡಂಡ ಸಿ. ಕುಟ್ಟಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್, ಭಾರತೀಯ ಸೇವೆಯ ಅಗ್ನಿಪತ್‌ನಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ಪೊದವಡ ರಕ್ಷಿತ್ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು, ಎಲ್ಲಾ ಸದಸ್ಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಪಾಲೂರು ಕೊಡವಾಮೆ ಕೂಟದ ಸದಸ್ಯರಾದ ಚೆರುವಾಳಂಡ ಜಪ್ಪು ಉತ್ತಪ್ಪ ಕಳೆದ ಸಾಲಿನ ವಾರ್ಷಿಕ ವರದಿ ಓದಿದರು. ಗೌರವ ಕಾರ್ಯದರ್ಶಿ ಚೆರುವಾಳಂಡ ದೀನಾ ಜೋಯಪ್ಪ ಲೆಕ್ಕಪತ್ರ ಮಂಡಿಸಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು. ಕೊಡವಾಮೆ ಕೂಟದ ಸಮಿತಿಯ ಸದಸ್ಯರುಗಳಾದ ಮಂದನೆರವAಡ ಪ್ರಗತ್ ಕಾರ್ಯಪ್ಪ ಸ್ವಾಗತಿಸಿದರು. ಪೋದುವಡ ಗಿರೀಶ್ ಅಯ್ಯಣ್ಣ, ಅತಿಥಿ ಪರಿಚಯಿಸಿ, ವಂದಿಸಿದರು. ನೆರವಂಡ ಶಿಲ್ಪ ಪೊನ್ನಣ್ಣ ಮುಖ್ಯ ಅತಿಥಿ ಮತ್ತು ಸನ್ಮಾನಿತರ ಪರಿಚಯವನ್ನು ಮಾಡಿದರು.ಕೂಟದ ಉಪಾಧ್ಯಕ್ಷರಾದ ಮೇಪಾಡಂಡ ರಮೇಶ್, ಪೊದುವಡ ಅಪ್ಪಿ ಅಚ್ಚಯ್ಯ, ಮೇಪಾಡಂಡ ಜೋಯಪ್ಪ ಉಪಸ್ಥಿತರಿದ್ದರು.