ಚೆಯ್ಯAಡಾಣೆ, ಜ. ೬: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾA ರಾಜ್ಯದ ದರಾಂಗ್ ಜಿಲ್ಲೆಯ ನಿವಾಸಿ ಮುಸ್ತಫ ಅಲಿ (೨೫), ಅದೇ ಜಿಲ್ಲೆಯ ಮಾಜೂಮ್ ಅಲಿ (೩೪) ಬಂಧಿತ ಆರೋಪಿಗಳಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊದವಾಡ ಗ್ರಾಮದ ರಾಫೆಲ್ಸ್ ಶಾಲೆ ಬಳಿಯ ಬಸ್ ತಂಗುದಾಣದಲ್ಲಿ ಮಾಜೂಮ್ ಅಲಿ, ಕುಂಬಳದಾಳು ಗ್ರಾಮದ ಕುಯ್ಯಂಗೇರಿ ರಸ್ತೆಯಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣದಲ್ಲಿ ಮುಸ್ತಫ ಅಲಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಾಪೋಕ್ಲು ಪೊಲೀಸರು ಮುಸ್ತಫ ಅಲಿ ಎಂಬಾತನಿAದ ಮಾರಾಟಕ್ಕೆ ಇಟ್ಟಿದ್ದ ೨೩೪ ಗ್ರಾಂ ಗಾಂಜಾ ಹಾಗೂ ಮಾಜೂಮ್ ಅಲಿ ಎಂಬಾತನಿAದ ಮಾರಾಟಕ್ಕೆ ಇಟ್ಟಿದ್ದ ೧೫೫ ಗ್ರಾಂ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.