ಗೋಣಿಕೊಪ್ಪಲು, ಜ. ೭: ಪೊನ್ನಂಪೇಟೆಯಲ್ಲಿ ನಿರ್ಮಾಣವಾ ಗುತ್ತಿರುವ ಪ್ರಜಾಸೌಧದ ಕಟ್ಟಡಕ್ಕೆ ಹಳೆಯ ಕೊಡಗು ಮೀರ‍್ಸ್ ಘಟಕದ ಕಟ್ಟಡವು ಅಡ್ಡಿಯಾಗಿದ್ದು, ಕಾಮಗಾರಿಗೆ ಅಡಚಣೆ ಉಂಟು ಮಾಡುತ್ತಿದೆ.
ಹೊಸ ಕಟ್ಟಡ ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಾಗಿಸಲು ಹಾಗೂ ಕಾಮಗಾರಿ ತ್ವರಿತವಾಗಿ ನಡೆಸಲು ಅನಾನುಕೂಲವಾಗುತ್ತಿದೆ. ಈ ಹಳೆಯ ಕಟ್ಟಡದಲ್ಲಿ ನಿರುಪಯುಕ್ತ ಸಾಮಗ್ರಿಗಳು ದಾಸ್ತಾನು ಮಾಡಲಾಗಿದ್ದು, ಇದನ್ನು ಕೂಡಲೇ ತೆರವು ಮಾಡಿ ನೂತನ ಕಟ್ಟಡ ಕಾಮಗಾರಿಗೆ ಅನುಕೂಲ ಕಲ್ಪಿಸಲು ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಸರಕಾರದಿಂದ ಮೀರ‍್ಸ್ ಉತ್ಪಾದನೆಗಾಗಿ ಘಟಕವನ್ನು ತೆರೆಯಲಾಯಿತು. ಕಾಲಕ್ರಮೇಣ ಅಧುನಿಕ ಉಪಕರಣಗಳು ಬಂದ ಹಿನ್ನೆಲೆ ಇಲ್ಲಿ ಉತ್ಪಾದನೆ ಸ್ಥಗಿತಗೊಂಡಿತು. ಕಟ್ಟಡದ ಒಂದು ಭಾಗವನ್ನು ಕೆಡವಲಾಗಿದೆ. ಆದರೆ, ನಿರುಪಯುಕ್ತ ವಸ್ತುಗಳು ಇರುವ ಭಾಗ ಹಾಗೆಯೇ ಉಳಿದುಕೊಂಡಿದ್ದು, ಕಟ್ಟಡವನ್ನು ಕೆಡವಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದೆ.
ದಕ್ಷಿಣ ಕೊಡಗಿನ ನಾಗರಿಕರ ಬಹುನಿರೀಕ್ಷಿತ ಪೊನ್ನಂಪೇಟೆ ತಾಲೂಕಿನ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಇತ್ತೀಚೆಗೆ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಶಂಕುಸ್ಥಾಪನೆ ನೆರವೇರಿಸಿದ್ದರು. ಪೊನ್ನಂಪೇಟೆ ನೂತನ ತಾಲೂಕಿಗೆ ಪ್ರಜಾಸೌಧ ನಿರ್ಮಾಣಕ್ಕೆ ಅಗತ್ಯವಿದ್ದ ೮.೬೦ ಕೋಟಿ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಎ.ಎಸ್.ಪೊನ್ನಣ್ಣ ಅವರು ಯಶಸ್ವಿಯಾಗಿದ್ದರು. ಕಾಮಗಾರಿಯು ಪ್ರಗತಿಯ ಲ್ಲಿದ್ದು ಇತ್ತೀಚೆಗೆ ಕಟ್ಟಡಕ್ಕೆ ಬೇಕಾದ ಸಾಮಾಗ್ರಿಗಳನ್ನು ಸಾಗಿಸುವ ಸಂರ್ಭದಲ್ಲಿ ಹಳೆಯ ಮೀರ‍್ಸ್ ಘಟಕದ ಕಟ್ಟಡವು ಅಡ್ಡಿಯಾಗುತ್ತಿದೆ. ೨ ಅಂತಸ್ತಿನ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ೮.೬೦ ಕೋಟಿ ಹಣವನ್ನು ಮೀಸಲಿಡಲಾಗಿದೆ. ಈ ಕಟ್ಟಡದಲ್ಲಿ ೪ ಅಂತಸ್ತು ಕಟ್ಟಡವನ್ನು ನಿರ್ಮಿಸಬಹುದಾಗಿದೆ. ಕಾಲ ಕಾಲಕ್ಕೆ ಜನರ ಅನುಕೂಲಕ್ಕಾಗಿ ಕಾಮಾಗಾರಿಯಾಗಿ ವಿಸ್ತರಿಸಲು ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ೧೭ ಸಾವಿರ ಚದರ ಅಡಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಆದರೆ, ಹಳೆ ಕಟ್ಟಡ ಇರುವುದರಿಂದ ಕಾಮಗಾರಿಗೆ ತೊಡಕು ಉಂಟಾಗುತ್ತಿದ್ದು, ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
- ಹೆಚ್.ಕೆ.ಜಗದೀಶ್