ಮಡಿಕೇರಿ, ಜ. ೭: ಪೊನ್ನಂಪೇಟೆ ಕ್ಲಸ್ಟರ್ನ ಬಲ್ಯಮಂಡೂರು ಗ್ರಾ. ಪಂ. ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೋಷಕರ-ಶಿಕ್ಷಕರ ಸಂಘದ ಮಹಾಸಭೆ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಲ್ಲಿಗೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜ, ಅಂಗನವಾಡಿ ಶಿಕ್ಷಕರಾದ ಪದ್ಮ, ಸುನೋಜಮ್ಮ, ಹಸೀನಾ ಹಾಜರಿದ್ದರು. ಮುಖ್ಯ ಶಿಕ್ಷಕಿ ಕೆ.ಪಿ. ಪವಿತ್ರ ಮಾತನಾಡಿ, ಮಕ್ಕಳ ಹಾಜರಾತಿ, ಮಕ್ಕಳ ಕಲಿಕೆ, ಮಕ್ಕಳ ವೈಯಕ್ತಿಕ ಸ್ವಚ್ಛತೆ, ಮಧ್ಯಾಹ್ನದ ಬಿಸಿಯೂಟ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನೀಡುತ್ತಿರುವ ಮೊಟ್ಟೆ ವಿತರಣೆ ಬಗ್ಗೆ, ಕಲಿಕಾ ಹಬ್ಬದ ಬಗ್ಗೆ ತಿಳಿಸಿ ಚರ್ಚೆ ಮಾಡಿದರು.
ಕೃತಜ್ಞತಾ ಫಲಕಗಳ ಮೂಲಕ ಮಕ್ಕಳಿಗೆ ಮತ್ತು ಪೋಷಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ವಾರ್ಷಿಕ ಪರೀಕ್ಷೆ ಬಗ್ಗೆ ತಿಳಿಸಿದರು. ಈ ಸಂದರ್ಭ ಪೋಷಕರಾದ ಜಯಲಕ್ಷಿö್ಮ, ಮುತ್ತಕ್ಕಿ, ಬೋಜಿ, ಅಣ್ಣಪ್ಪ, ಶಶಿಕಲಾ, ಸಹ ಶಿಕ್ಷಕ ತಿರುನೆಲ್ಲಿಮಾಡ ಜೀವನ್ ಹಾಜರಿದ್ದರು.