ಮಡಿಕೇರಿ, ಜ.೬: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ತಾ. ೫ ರಿಂದ ಜಾರಿಗೆ ಬರುವಂತೆ ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಕಾರ್ಯಾಚರಿಸುವ ರಾಜಹಂಸ ಹಾಗೂ ನಾನ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದು ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ತಿಳಿಸಿದ್ದಾರೆ.

ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.೭೮೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ ರೂ.೭೦೦, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.೬೮೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ ರೂ.೫೫೦, ಕುಶಾಲನಗರ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.೬೨೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೫೦೦,

ವೀರಾಜಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.೬೨೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೫೫೦, ಗೋಣಿಕೊಪ್ಪ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.೬೨೦,ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೫೫೦, ಸೋಮವಾರಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.೬೩೦, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೫೫೦, ಮಡಿಕೇರಿ-ಮೈಸೂರು ಮಾರ್ಗ ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.೫೭೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೪೫೦, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.೪೩೦, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.೨೮೦ ಆಗಿದೆ.

ಸಾರ್ವಜನಿಕ ಪ್ರಯಾಣಿಕರು ಈ ರಿಯಾಯಿತಿ ಪ್ರಯಾಣದರದ ಸದುಪಯೋಗವನ್ನು ಪಡೆದುಕೊಂಡು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವಂತೆ ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಕೋರಿದ್ದಾರೆ.