ಮಡಿಕೇರಿ, ಜ. ೬: ಮಡಿಕೇರಿ ತಾಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿ ಸುವ ಮೂಲಕ ಚಾಲನೆ ನೀಡಿದರು.
ಕೆ.ಆರ್.ಐ.ಡಿ.ಎಲ್. ಸಂಸ್ಥೆ ಮೂಲಕ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೂ. ೪೦ ಕೋಟಿ ವೆಚ್ಚದಲ್ಲಿ ಒಟ್ಟು ೨೫೨ ಕಾಮಗಾರಿಗಳನ್ನು ಎ.ಎಸ್. ಪೊನ್ನಣ್ಣ ಅÀವರು ಜನರ ಕೋರಿಕೆಯ ಮೇರೆಗೆ ಗುರುತಿಸಿ ಅನುದಾನದ ಹಂಚಿಕೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ. ಸಾರ್ವಜನಿಕರಿಂದ ಮತ್ತಷ್ಟು ಕೋರಿಕೆಗಳು ಸಲ್ಲಿಕೆಯಾಗಿದ್ದು ಅವುಗಳನ್ನು ಪರಿಗಣನೆಗೆ ತೆಗೆದು ಕೊಳ್ಳಲಾಗುವುದು ಎಂದು ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದರು.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಹನೀಫ್, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಮಾಜಿ ಮಂಡಲ ಪ್ರಧಾನರಾದ ಮುಂಜಾAದಿರ ಚಿಕ್ಕು ಕಾರ್ಯಪ್ಪ, ಕೇಟೋಳಿ ಮೋಹನ್ ರಾಜ್, ಅಪ್ರು ರವೀಂದ್ರ, ಹೊಸೂರು ಸೂರಜ್, ಪಿ.ಎಲ್. ಸುರೇಶ್, ವಲಯ ಕಾರ್ಯದರ್ಶಿ ಮಜೀದ್, ಬೊಳ್ದಂಡ ನಾಚಪ್ಪ, ಮಹಮದ್ ಕುಂಞ, ಮುಂಜಾAದಿರ ಅಜಿತ್, ತೋರೆರ ಮುದ್ದಯ್ಯ, ಮುಂಜಾAದಿರ ಸದಾ, ಕಾಳೇರಮ್ಮನ ಕುಮಾರ್, ಪಟ್ಟಡ ದೀಪಕ್, ಮೊಯ್ದು ಬೆಟ್ಟಗೇರಿ, ಹನೀಫ್ ಸಂಪಾಜೆ, ರಘು, ಮುಂಜಾAದಿರ ಬೋಪಣ್ಣ, ಕೊಕ್ಕಂಡ ಚಂಗಪ್ಪ, ಪುದಿನೆರವನ ಆಶಾ, ಗಣೇಶ್, ಗುತ್ತಿಗೆದಾರ ನರೆನ್ ಸೋಮಯ್ಯ, ಅರ್ಚಕ ದೇವಿಪ್ರಸಾದ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.