ಕೂಡಿಗೆ, ಜ. ೬ : ಕೊಡಗಿನ ಗಡಿ ಭಾಗದ ಕೂಡಿಗೆ ಸಮೀಪದಲ್ಲಿರುವ ೧೯೮೧ರಲ್ಲಿ ಪ್ರಾರಂಭಗೊAಡ ಜಿಲ್ಲೆಯ ಏಕೈಕ ಕಾವೇರಿ ಹ್ಯಾಂಡ್ ಲೂಂ ಶಾಖೆಯಾದ ಕಾವೇರಿ ಸಮೂಹ ನೇಯ್ಗೆ ಕೇಂದ್ರವು ಅಭಿವೃದ್ಧಿ ಕಾಣದ ಮೂಲೆ ಗುಂಪಾಗಿ ಇದೀಗ ಬೀಳುವ ಹಂತ ತಲುಪಿದೆ ನೇಯ್ಗೆ ಕಾರ್ಯವನ್ನು ಕಳೆದ ೧೫.ವರ್ಷಗಳಿಂದಲೂ ಸ್ಥಗಿತಗೊಳಿಸಲಾಗಿದೆ.

ತೀರಾ ಹಳೆಯ ಕಟ್ಟಡವಾದ ಕಾರಣದಿಂದಾಗಿ ಅಳವಡಿಕೆ ಮಾಡಲಾಗಿದ್ದ ಕಿಟಕಿ, ಬಾಗಿಲುಗಳು ಗೆದ್ದಲು ಹಿಡಿದಿದೆ. ಅಲ್ಲದೆ ಕಟ್ಟಡದ ಒಂದು ಭಾಗದ ಗೋಡೆಯು ಸಹ ಅತಿಯಾದ ಮಳೆಯಿಂದಾಗಿ ಮಳೆಯ ನೀರು ಸೋರಿಕೆಯಾಗಿ ಕುಸಿದು ಬಿದ್ದಿದೆ. ಕಳೆದ ಮೂರು ತಿಂಗಳುಗಳ ಹಿಂದೆ ಶಿರಂಗಾಲ ಕೈ ಮಗ್ಗ ಕೇಂದ್ರಕ್ಕೆ ಜವಳಿ ಮಂತ್ರಾಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಟ್ಟಡದ ವ್ಯವಸ್ಥೆಯನ್ನು ಸಂಪೂರ್ಣವಾಗಿ ವೀಕ್ಷಿಸಿ ಕಟ್ಟಡವನ್ನು ಸರಕಾರದ ನಿಯಮಾನುಸಾರ ಕಾರ್ಯ ಸೂಚಿ ಅನ್ವಯ ಕೆಡವಿ ನೂತನ ಕಟ್ಟಡಕ್ಕೆ ನಕ್ಷೆ ಮತ್ತು ಕ್ರಿಯಾ ಯೋಜನೆ ತಯಾರಿಸಲು ಸಂಬAಧಿಸಿದ ಅಧಿಕಾರಿ ವರ್ಗದವರಿಗೆ ಸೂಚನೆ ನೀಡಿದರು.

ಈ ನೇಯ್ಗೆ ಕೇಂದ್ರದಲ್ಲಿ ಆರಂಭದಲ್ಲಿ ನೂರಾರು ಮಂದಿ ನೇಯ್ಗೆಯಲ್ಲಿ ತೊಡಗಿದ್ದರು. ಇತ್ತೀಚಿನ ವರ್ಷಗಳಲ್ಲಿ ೧೫ವರ್ಷಗಳಿಂದಲೂ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಕಂಡುಬರುತ್ತಿದೆ. ರಾಜ್ಯ ಮಟ್ಟದ ನಿಗಮದ ಅಧಿಕಾರಗಳ ನಿರ್ಲಕ್ಷö್ಯ ಇದಕ್ಕೆ ಕಾರಣ ಎಂಬುದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ. ಇದೀಗ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಸಂಪೂರ್ಣವಾಗಿ ಬೀಳುವ ಹಂತ ತಲುಪಿದೆ.

ಈ ಕೇಂದ್ರದಲ್ಲಿ ಕಳೆದ ೧೫ವರ್ಷಗಳ ಹಿಂದೆ ಇದ್ದ ಓರ್ವ ಅಧಿಕಾರಿ ಸಮಗ್ರವಾಗಿ ನೇಯ್ಗೆ ಮಾಡಲು ಕಚ್ಚಾ ವಸ್ತುಗಳನ್ನು ನೀಡುತ್ತಿದ್ದರು. ಅದರೆ ನೇಯ್ಗೆಯ ಮೂಲಕ ಸಿದ್ಧವಾದ ಬೆಡ್ ಶೀಟ್ ಮತ್ತು ಟವಲ್‌ಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಯ ಮೂಲಕ ಇಲಾಖೆ ಸಾಗಾಟ ಮಾಡಿದರೂ ಸಹ ಸರಿಯಾದ ಬೆಲೆಯಿಲ್ಲದೆ,ಕೈ ಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಅವರ ಕೆಲಸಕ್ಕೆ ತಕ್ಕಂತೆ ಹಣ ದೊರಕುತ್ತಿರಲಿಲ್ಲ.

ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಬಹುಜನರಿದ್ದು,ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲವಾಗಿತ್ತು. ಅದರೆ ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರ ಕಳೆದ ೧೦ವರ್ಷಗಳಿಂದಲೂ ಮುಚ್ಚಲ್ಪಟ್ಟು ದಿನಕಳೆದಂತೆ ಶಿಥಿಲಾವಸ್ಥೆ ತಲುಪಿ ಕಟ್ಟಡ ಸಂಪೂರ್ಣವಾಗಿ ಬೀಳುವ ಹಂತ ತಲುಪಿದೆ. ಸಂಬAಧಿಸಿದ ಇಲಾಖೆಯ ಅಧಿಕಾರಿಗಳಾಗಲಿ ಕೈ ಮಗ್ಗ ನಿಗಮದ ರಾಜ್ಯ ಅಧ್ಯಕ್ಷರು, ಪದಾಧಿಕಾರಿಗಳಾಗಲಿ ಇದರ ಬಗ್ಗೆ ಗಮನ ಹರಿಸದೇ ಇರುವುದರಿಂದಾಗಿ ಸ್ಥಳೀಯ ಯುವಕರು ಕೆಲಸ ನಿಮಿತ್ತ ಬೇರೆ, ಜಿಲ್ಲೆ ಮತ್ತು ರಾಜಧಾನಿ ಕಡೆಗೆ ತೆರಳುವಂತಹ ಪ್ರಸಂಗ ಎದುರಾಗುತ್ತಿದೆ.

ಜಿಲ್ಲೆಯಲ್ಲೇ ಏಕೈಕ ನೇಯ್ಗೆ ಕೇಂದ್ರವಾಗಿದ್ದು, ಈ ಕೇಂದ್ರವು ಜಿಲ್ಲೆಯಲ್ಲಿ ಉಪ ಕೇಂದ್ರದ ಶಾಖೆಗಳನ್ನು ಹೊಂದಿತ್ತು. ಇದೀಗ ಕಳೆದ ೧೫. ವರ್ಷಗಳಿಂದಲೂ ಮಡಿಕೇರಿ, ಕುಶಾಲನಗರದಲ್ಲಿ ಇದ್ದ ಶಾಖೆಗಳು ಮುಚ್ಚಲ್ಪಟ್ಟಿವೆ.

ಕಳೆದ ವರ್ಷದ ಹಿಂದೆ ಶಿರಂಗಾಲ ಗ್ರಾಮದಲ್ಲಿರುವ ಕೈಮಗ್ಗ ಕೇಂದ್ರಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳು, ಮತ್ತು ಇಲಾಖೆಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಅತಿ ಶೀಘ್ರದಲ್ಲಿ ಬದಲಿ ವ್ಯವಸ್ಥೆ ಮಾಡಲು ಸಿದ್ದ ಮಾಡುತ್ತೇವೆ. ಅಲ್ಲದೆ ಇಲಾಖೆಯ ವತಿಯಿಂದ ನೂತನ ಕಟ್ಟಡದ ಕಾಮಗಾರಿಯನ್ನು ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಅಧಿಕಾರಿಯೂ ಸ್ಧಳ ಪರಿಶೀಲನೆ ಮಾಡಿಲ್ಲ, ಯಾವುದೇ ರೀತಿಯ ಕ್ರಮಕ್ಕೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮುಂದಾಗಿಲ್ಲ ಎಂದು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಆರೋಪಿಸಿದ್ದಾರೆ.

ಈ ಕೈಮಗ್ಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಓರ್ವ ಅಧಿಕಾರಿಯು ಸಹ ನಿವೃತ್ತಿ ಅಗಿ ೧೫ ವರ್ಷಗಳು ಕಳೆದಿದೆ. ಕಟ್ಟಡದ ಒಳಗೆ ಇದ್ದ ಹಿಂದಿನ ಕೈ ಮಗ್ಗದ ಕಚ್ಚಾ ವಸ್ತುಗಳು ನೇಯ್ಗೆ ಯಂತ್ರಗಳು ಒಳಗೆ ಇದ್ದರೂ ಸಹ ಸಂಬAಧಿಸಿದ ಅಧಿಕಾರಿ ವರ್ಗದವರು ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಸ್ಥಳೀಯ ನೇಕಾರರು ದೂರಿದ್ದಾರೆ.

ಜಿಲ್ಲೆಯ ಏಕೈಕ ಕೈಮಗ್ಗವಾಗಿರುವ ಶಿರಂಗಾಲದ ಈ ಘಟಕವನ್ನು ಅಭಿವೃದ್ಧಿ ಪಡಿಸಲು, ನೂತನ ತಂತ್ರಜ್ಞಾನದ ಅಡಿಯಲ್ಲಿ ಹೊಸ ಕಟ್ಟಡದ ನಿರ್ಮಾಣ, ಮತ್ತು ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸುವ ಹಿತದೃಷ್ಟಿಯಿಂದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಮುಂದಾಗಬೇಕೆAಬದು ಗ್ರಾಮಸ್ಥರ ಒತ್ತಾಯವಾಗಿದೆ.

ಶಿರಂಗಾಲ ಗ್ರಾಮ ವ್ಯಾಪ್ತಿಯ ನೇಯ್ಗೆ ಕಾರರಿಗೆ ಉತ್ತಮವಾದ ಬದುಕು ರೂಪಿಸಿಕೊಡಬೇಕಿದ್ದ ಕೈ ಮಗ್ಗ ಘಟಕ ಆಧುನೀಕರಣದ ವಿದ್ಯುತ್ ಘಟಕ ಅಬ್ಬರ ಹಾಗೂ ಸರಕಾರದ ನಿರ್ಲಕ್ಷö್ಯಕ್ಕೆ ಒಳಗಾಗಿ ದುಸ್ಧಿತಿಯತ್ತ ಸಾಗುತ್ತಿದೆ. ಅದರ ಅಭಿವೃದ್ಧಿ ಮತ್ತು ಸ್ಥಳೀಯ ಯುವಕರಿಗೆ ತರಬೇತಿ ನೀಡುವ ಮೂಲಕ ಅಭಿವೃದ್ಧಿ ಹೊಂದಲು ಅಧಿಕಾರಿ ವರ್ಗದವರು ಜನಪ್ರತಿನಿಧಿಗಳ ಪ್ರಯತ್ನ ಬಹು ಮುಖ್ಯವಾಗಿರುತ್ತದೆ. ಸಂಬAಧಿಸಿದ ಅಧಿಕಾರಿ ವರ್ಗದವರು ತೀರಾ ಹಾಳಾಗಿರುವ ಕಟ್ಟಡವನ್ನು ಕೆಡವಿ ಸುಸಜ್ಜಿತ ಅಧುನಿಕ ತಂತ್ರಜ್ಞಾನದ ಮೂಲಕ ನೂತನ ಕಟ್ಟಡ ನಿರ್ಮಾಣ ಮಾಡಿ ಅಧುನಿಕ ಯಂತ್ರಗಳ ಅಳವಡಿಕೆ ಮಾಡಿ ನಿರುದ್ಯೋಗಿ ಯುವಕರಿಗೆ ಉದ್ಯೋಗÀ ಅವಕಾಶಗಳನ್ನು ಒದಗಿಸುವ ಕಾರ್ಯದಲ್ಲಿ ಮುಂದಾಗಬೇಕೆAದು ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳ ಅಗ್ರಹವಾಗಿದೆ.

ಶಿರಂಗಾಲದ ಕಾವೇರಿ ನೇಯ್ಗೆ ಕೇಂದ್ರದ ಬಗ್ಗೆ ಜಿಲ್ಲಾ ಕೈಮಗ್ಗ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರ ಅಭಿಪ್ರಾಯ ಬಯಸಿದಾಗ ಈಗಾಗಲೇ ಶಿಥಿಲವಾದ ಕಟ್ಟಡವನ್ನು ಕೆಡವಲು ಲೋಕೋಪಯೋಗಿ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ . ಕೆಡವಿದ ನಂತರ ಸರಕಾರದ ಮಟ್ಟಿಗೆ ಅದಕ್ಕೆ ಸಂಬAಧಿಸಿದ ಕ್ರಿಯಾ ಯೋಜನೆಯನ್ನು ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯ ಕಾವೇರಿ ಹ್ಯಾಂಡ್ ಲೂಂನ ಅಧ್ಯಕ್ಷರಾದ. ಗಣೇಶ್ ಅವರನ್ನು ಮಾತನಾಡಿಸಿದಾಗ ಈಗಾಗಲೇ ಕೊಡಗು ಜಿಲ್ಲೆಯ ಶಿರಂಗಾಲ ಗ್ರಾಮದಲ್ಲಿರುವ ಕಾವೇರಿ ನೇಯ್ಗೆ ಕೇಂದ್ರದ ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರು ಶಿರಂಗಾಲ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಭಿವೃದ್ಧಿಗೆ ಅನುದಾನ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ, ಸರಕಾರದೊಂದಿಗೆ ಪತ್ರ ವ್ಯವಹಾರದ ಮೂಲಕ ಪ್ರಯತ್ನ ಮಾಡುವ ಭರವಸೆ ನೀಡಿರುತ್ತಾರೆ. ಇಲಾಖೆ ಜೊತೆಯಲ್ಲಿ ಹ್ಯಾಂಡ್ ಲೂಂ ನ ಸಹಕಾರದೊಂದಿಗೆ ಮತ್ತೆ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಾದ ಕೆ. ಜ್ಯೋತಿ ಅವರು ಶಿರಂಗಾಲದಲ್ಲಿರುವ ಕಾವೇರಿ ನೇಯ್ಗೆ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರಕ್ಕೆ ೨ಕೋಟಿ ಅನುದಾನದ ಪ್ರಸ್ತಾವನೆಯನ್ನು ಕೋರಿ ಪತ್ರ ವ್ಯವಹಾರ ಮಾಡಲಾಗಿದೆ. ಶಿರಂಗಾಲದಲ್ಲಿರುವ ಹಳೆಯ ಕಟ್ಟಡವನ್ನು ಕೆಡವಲು ಈಗಾಗಲೇ ಕೈಮಗ್ಗ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಕೈಮಗ್ಗದ ಪುನರ್ ಚೇತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜೊತೆಗೆ ಪರಂಪರೆಯ ಕೈಮಗ್ಗವಾಗಿರುವ ಹಿನ್ನೆಲೆಯಲ್ಲಿ ಅದರ ಅಭಿವೃದ್ಧಿಯ ಜೊತೆಯಲ್ಲಿ ಮಹಿಳೆಯರ ಸಬಲೀಕರಣದ ಮೂಲಕ ಸ್ವಉದ್ಯೋಗದ ವ್ಯವಸ್ಥೆಯ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ಹರಿಸಲಾಗಿದೆ. ಜೊತೆಯಲ್ಲಿ ಇಲಾಖೆ ಅನುದಾನವನ್ನು ಬಳಕೆ ಮಾಡಿಕೊಂಡು ಪ್ರಥಮ ಹಂತದ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಶಿರಂಗಾಲ ಕಾವೇರಿ ಹ್ಯಾಂಡ್ ಲೂಂ ಕೈಮಗ್ಗದ ಅಭಿವೃದ್ಧಿಗೆ ಪೂರಕವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಜವಳಿ ಸಚಿವರೊಂದಿಗೆ ಮಾತಾನಾಡಿ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಸಧ್ಯದಲ್ಲಿ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ