ಸೋಮವಾರಪೇಟೆ, ಜ. ೬: ಸಮೀಪದ ಸಾಂದೀಪನಿ ಶಾಲೆಯಲ್ಲಿ ಹೊಸ ವರ್ಷವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಮಾತನಾಡಿ, ಹಿರಿಯವರು ರೂಢಿಸಿಕೊಂಡು ಬಂದಿರುವ ಆಚಾರ-ವಿಚಾರಗಳನ್ನು ಯುವ ಪೀಳಿಗೆ ಉಳಿಸಿ ಬೆಳೆಸಬೇಕು ಎಂದರು. ನೂತನ ವರ್ಷಾಚರಣೆಯಂದು ವಿದ್ಯಾರ್ಥಿಗಳು ಪಂಚೆ, ಶರ್ಟ್ ಮತ್ತು ಶಲ್ಯ ಹಾಗೂ ವಿದ್ಯಾರ್ಥಿನಿಯರು ಲಂಗ-ದಾವಣಿ ಮತ್ತು ಉದ್ದನೆಯ ಸ್ಕರ್ಟ್, ಕುಪ್ಪಸ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಿಸಿದರು.

ಇದರೊAದಿಗೆ ಮನೆಯಲ್ಲಿ ತಯಾರಿಸಿದ ಅಕ್ಕಿ ರೊಟ್ಟಿ, ಕಡುಬು ಸವಿದರು. ಶಿಕ್ಷಕರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು. ಮುಖ್ಯ ಶಿಕ್ಷಕಿ ರೇವತಿ, ಸಹ ಶಿಕ್ಷಕಿಯರು, ಸಿಬ್ಬಂದಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು.