ಕಣಿವೆ, ಜ. ೭: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ರೂ. ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾಂಬರು ರಸ್ತೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮುಳ್ಳುಸೋಗೆ-ಗುಮ್ಮನಕೊಲ್ಲಿ ಪ್ರದೇಶದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ೭೦ ಲಕ್ಷಕ್ಕೂ ಹೆಚ್ಚಿನ ಅನುದಾನಗಳ ವಿವಿಧ ಕಾಮಗಾರಿ ಮಾಡಲಾಗಿದೆ. ಮತ್ತೆ ಎರಡು ತಿಂಗಳ ಅವಧಿಯಲ್ಲಿ ಹತ್ತು ಕೋಟಿ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಷಿ, ಪಕ್ಷದ ಪ್ರಮುಖರಾದ ಎಂ.ವಿ. ಹರೀಶ್, ಪದ್ಮಾವತಿ, ಪ್ರಕಾಶ್, ಬಿ.ಜಿ. ರವಿಕುಮಾರ್, ಆನಂದ, ಧನಪಾಲ, ನಾಗಮಲ್ಲೇಶ್, ಧನಲಕ್ಷಿö್ಮ ಮತ್ತಿತರರಿದ್ದರು.