ವೀರಾಜಪೇಟೆ, ಜ. ೮: ಕೇರಳದ ಉಳಿಕಲ್ನಲ್ಲಿರುವ ಶ್ರೀ ಆದಿ ಬೈತೂರ್ ಕಾಲಿಯಾರ್ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೩ ರಿಂದ ೨೬ ವರೆಗೆ ನಡೆಯಲಿದೆ ಎಂದು ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೨ ರಂದು ಪುಗ್ಗೆರ ಕುಟುಂಬದ ಎತ್ತು ಪೋರಾಟ, ಅಕ್ಕಿ ಅಳೆಯುವುದು, ೨೩ ರಂದು ನಾಡಿನ ಎತ್ತು ಪೋರಾಟಕ್ಕೆ ಅಕ್ಕಿ ಅಳೆಯುವುದು, ರಾತ್ರಿ ೮.೩೦ ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, ೯ ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ಈಡುಗಾಯಿ ಸೇವೆ, ೨೪ ರಂದು ದೊಡ್ಡ ಹಬ್ಬ, ಅಪರಾಹ್ನ ೨.೩೦ ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ, ೨೫ ರಂದು ಬೆಳಿಗ್ಗೆ ೯.೩೦ ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ. ಹಬ್ಬಕ್ಕೆ ಬರುವ ಭಕ್ತಾದಿಗಳು ಕೊಡಗಿನ ಸಾಂಪ್ರಾದಾಯಿಕ ಉಡುಪಿನೊಂದಿಗೆ ಆಗಮಿಸುವಂತೆ ಮನವಿ ಮಾಡಿದರು. ಶ್ರೀ ಆದಿ ಬೈತೂರಪ್ಪ ಭಕ್ತ ಜನ ಸಂಘದ ಅಧ್ಯಕ್ಷ ಅಮ್ಮಣಕುಟ್ಟಂಡ ಕಿರಣ್ ಸುಬ್ರಮಣಿ ಮಾತನಾಡಿ, ಉತ್ಸವಕ್ಕೆ ಸಹಕಾರ ನೀಡುವಂತೆ ಕೋರಿದರು.
ಗೋಷ್ಠಿಯಲ್ಲಿ ಶ್ರೀ ಆದಿ ಬೈತೂರಪ್ಪ ಭಕ್ತ ಜನ ಸಂಘದ ಸಂಚಾಲಕ ಚೇಂದAಡ ಶಿವುಕುಮಾರ್, ಖಜಾಂಜಿ ಅಲ್ಲಪಂಡ ಲಿಖಿತ್ ಮುತ್ತಣ್ಣ, ನಿರ್ದೇಶಕರಾದ ಬಡುವಮಂಡ ಜೀವನ್, ಮಂಡೇಪAಡ ರಿಶು ಕಾರ್ಯಪ್ಪ ಉಪಸ್ಥಿತರಿದ್ದರು.