ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಜ.೮: ಸಂರಕ್ಷಿತ ಅರಣ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಇದೀಗ ಅರಣ್ಯದಂಚಿನ ರೈತರ, ಬೆಳೆಗಾರರ ಕಾಫಿ ತೋಟ, ಭತ್ತದ ಗದ್ದೆ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಟ ನಡೆಸುತ್ತಿದ್ದು ನಾಗರಿಕರನ್ನು ಭಯಭೀತರನ್ನಾಗಿ ಮಾಡಿದೆ. ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿದ ಹುಲಿಯು ಹಸುವನ್ನು ಸಮೀಪದ ಹೊಳೆ ಬದಿಗೆ ಹೊತ್ತೊಯ್ದು ಕೊಂದು ಹಾಕಿದೆ.
ಬಿಟ್ಟಂಗಾಲ ಸಮೀಪದ ಕಂಡAಗಾಲ ಗ್ರಾಮದ ೧ನೇ ರುದ್ರಗುಪ್ಪೆಯ ರೈತರಾದ ಬಲ್ಲಡಿಚಂಡ ಲೋಕನಾಥ್ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಕಳೆದ ೧೫ ದಿನಗಳಲ್ಲಿ ಈ ಭಾಗದಲ್ಲಿ ೩ ಜಾನುವಾರುಗಳು ನಾಪತ್ತೆಯಾಗಿವೆ. ಹಸುವನ್ನು ಹುಡುಕುವ ಪ್ರಯತ್ನವನ್ನು ಇಲ್ಲಿಯ ರೈತರು ಕೈ ಚೆಲ್ಲಿದ್ದಾರೆ. ಈ ಭಾಗದಲ್ಲಿ ಆಗಿಂದ್ದಾಗಿಯೇ ಹುಲಿ ರಾಯನ ದರ್ಶನವಾಗುತ್ತಿರುವುದರಿಂದ ಸಹಜವಾಗಿಯೇ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ತೆರಳುವುದನ್ನು ನಿಲ್ಲಿಸಿದ್ದಾರೆ.
ಹಲವು ಬಾರಿ ಹುಲಿ ಸೆರೆಗೆ ಇಲ್ಲಿಯ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ರೈತ ಸಂಘದ ಪ್ರಮುಖರು ಹಾಗೂ ಹಲವು ಮುಖಂಡರು ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ಡಿಎಫ್ಒ ಜಗನ್ನಾಥ್ ಹಾಗೂ ಇತರ ಅಧಿಕಾರಿಗಳ ಮೇಲೆ ತಮ್ಮ ಅಸÀಮಾಧಾನವನ್ನು ಹೊರ ಹಾಕಿದರು. ಅಲ್ಲದೆ ಅಧಿಕಾರಿಗಳಿಗೆ ಘೇರಾವು ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಹುಲಿಯ ಕಾರ್ಯಾಚರಣೆ ಬಗ್ಗೆ ಇಲಾಖೆಯು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ರೈತರು ಕೇಳುವ ಪ್ರಶ್ನೆಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಉತ್ತರಿಸಲಾಗದೆ ಮೌನವಹಿಸಿದರು. ಬಿಸಿಲಿನ ತಾಪವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಹುಲಿಗಳು ಅರಣ್ಯ ಪ್ರದೇಶದಿಂದ ನೀರಿನ ತೇವಾಂಶವಿರುವ ಕೆರೆ, ಹೊಳೆಬದಿ ಹಾಗೂ ತಂಪಾದ ಕಾಫಿ ತೋಟದಲ್ಲಿ ಆಗಿಂದ್ದಾಗಿಯೇ ನಾಗರಿಕರಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಹಜವಾಗಿಯೇ ದಕ್ಷಿಣ ಕೊಡಗಿನ ಬಹುತೇಕ ಭಾಗದಲ್ಲಿ ಹುಲಿಯ ಸಂಚಾರವಿರುವುದು ದೃಢಪಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಘೇರಾವು ಹಾಕಿದ ನಂತರ ರೈತರ, ಬೆಳೆಗಾರರ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಸಲಹೆಯಂತೆ ಘಟನಾ ಸ್ಥಳದಲ್ಲಿ ಹುಲಿ ಸೆರೆಗೆ ಬೋನನ್ನು ಅಳವಡಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡರು.ಸ್ಥಳೀಯ ರೈತರ, ಗ್ರಾಮಸ್ಥರ ಸಹಕಾರದಿಂದ ಹುಲಿಯ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಅಲ್ಲದೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ವೀರಾಜಪೇಟೆಯ ಡಿಎಫ್ಒ ಜಗನ್ನಾಥ್ ಭರವಸೆ ನೀಡಿದ ನಂತರ ಹುಲಿಯ ಕಾರ್ಯಾಚರಣೆಗೆ ಗ್ರಾಮಸ್ಥರು ಅನುವು ಮಾಡಿಕೊಟ್ಟರು.
ಸಮೀಪದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಹುಲಿ ಸಂರಕ್ಷಿತ ಪ್ರದೇಶದಿಂದ ಹಲವು ಹುಲಿಗಳು ಸುತ್ತಮುತ್ತಲಿನ ರೈತರ ಕಾಫಿ ತೋಟಗಳಿಗೆ ಆಗಮಿಸುತ್ತಿವೆ. ಹುಲಿಗಳು ರೈತರ ಕಾಫಿ ತೋಟದಲ್ಲಿ ಆಗಿಂದ್ದಾಗಿಯೇ ಕಾಣಿಸಿಕೊಂಡಿರುವುದರಿAದ ಸಹಜವಾಗಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಫಿ ಬೆಳೆಗಾರರಿಗೆ ನಿದ್ದೆ ಗೆಡಿಸಿದೆ. ಅರಣ್ಯ ಪ್ರದೇಶದಿಂದ ಇದೀಗ ಮತ್ತೆ ನಾಡಿನತ್ತ ಹುಲಿಯು ಆಗಮಿಸುತ್ತಿರುವುದರಿಂದ ಬಹುತೇಕ ರೈತರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.
ಗ್ರಾಮೀಣ ಭಾಗದಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ನಾಗರಿಕರಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಅರಣ್ಯ ವ್ಯಾಪ್ತಿಯಿಂದ ನಾಡಿನತ್ತ ಆಗಮಿಸುವ ಹುಲಿಗಳು ತನ್ನ ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುತ್ತಿರುವುದು ವರದಿಯಾಗುತ್ತಿವೆ. ಮೇಯಲು ಬಿಟ್ಟಿರುವ ಜಾನುವಾರುಗಳು ಸಂಜೆಯ ವೇಳೆ ಸುರಕ್ಷಿತವಾಗಿ ಮನೆ ಸೇರುವುದು ಸಂಶಯವಾಗಿದೆ ಎಂದು ಹಸು ಕಳೆದುಕೊಂಡ ಮಾಲೀಕರಾದ ಲೋಕನಾಥ್ ತಮ್ಮ ನೋವನ್ನು ತೋಡಿಕೊಂಡರು.
ಹುಲಿಯ ಭಯದಿಂದ ಹಸು ರೈತರ ಜಾನುವಾರುಗಳು ಕಾಣೆಯಾಗುತ್ತಿದ್ದರೂ ಅದನ್ನು ಧೈರ್ಯವಾಗಿ ಹುಡುಕುವ ಪ್ರಯತ್ನ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹೊಳೆ ಬದಿಯಲ್ಲಿ ದಟ್ಟವಾದ ಅರಣ್ಯ ಪ್ರದೇಶ ಇರುವುದರಿಂದ ಹುಲಿಯು ಈ ಭಾಗದಲ್ಲಿ ಆಗಿಂದ್ದಾಗಿಯೇ ನಾಗರಿಕರಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಜನರು ಭಯದ ವಾತಾವರಣದಲ್ಲಿಯೆ ದಿನಕಳೆಯುತ್ತಿದ್ದಾರೆ.
ತಿತಿಮತಿ ವಲಯದ ಎಸಿಎಫ್ ಗೋಪಾಲ್, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಮ್,ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ಇತರ ಸಿಬ್ಬಂದಿಗಳು ಗ್ರಾಮಸ್ಥರನ್ನು ಮನವೊಲಿಸುವ ಮೂಲಕ ಈ ಭಾಗದಲ್ಲಿ ಅರಣ್ಯ ಸಿಬ್ಬಂದಿಗಳಿAದ ಹುಲಿಯ ಕಾರ್ಯಾಚರಣೆಗೆ ಕೂಂಬಿAಗ್ ನಡೆಸುವುದಾಗಿ ತಿಳಿಸಿದರು.
ಸಂಜೆ ವೇಳೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮೃತಪಟ್ಟ ಜಾನುವಾರು ಕಳೆಬರವನ್ನು ಬೋನಿನಲ್ಲಿ ಇಡುವ ಮೂಲಕ ರಾತ್ರಿಯ ವೇಳೆಯಲ್ಲಿ ಹುಲಿಯು ಬೋನಿನಲ್ಲಿ ಬಂಧಿಯಾಗುವ ನಿರೀಕ್ಷೆಯಲ್ಲಿ ಇಲ್ಲಿನ ಸಿಬ್ಬಂದಿಗಳು ಎದುರು ನೋಡುತ್ತಿದ್ದಾರೆ. ಸ್ಥಳದಲ್ಲಿ ರೈತ ಮುಖಂಡರಾದ ಕೊಕ್ಕೆರ ಅಯ್ಯಣ್ಣ, ಗ್ರಾಮದ ಪ್ರಮುಖರಾದ ಮೇಚಂಡ ಉತ್ತಯ್ಯ, ಕೊಂಗAಡ ಧರ್ಮಜ, ರಫೀಕ್,ಮುನ್ನ,ಮೈದು, ಮಹಮ್ಮದ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.