ಮಡಿಕೇರಿ, ಜ. ೭: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ದೈವಜ್ಞ ದರ್ಶನ ಕಾರ್ಯಕ್ರಮ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ತಾ. ೮ ರಂದು (ಇಂದು) ಮಡಿಕೇರಿಯಲ್ಲಿ ನಡೆಯಲಿದೆ.
ಸಂಜೆ ೪.೩೦ ಗಂಟೆಗೆ ಶ್ರೀಶ್ರೀಗಳ ಪುರಪ್ರವೇಶವಾಗಲಿದೆ. ನಂತರ ಪೂರ್ಣ ಕುಂಭ ಮೆರವಣಿಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಚೌಡೇಶ್ವರಿ ದೇವಾಲಯದವರೆಗೆ ಸಾಗಲಿದೆ.
ನಂತರ ಶ್ರೀಗಳಿಗೆ ಪಾದುಕಾ ಪೂಜೆ, ಶ್ರೀಗಳಿಂದ ಆಶೀರ್ವಚನ, ಫಲಪುಷ್ಪ ಸಮರ್ಪಣೆ, ಫಲ ಮಂತ್ರಾಕ್ಷತೆ ನೆರವೇರಲಿದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಸ್ವಾಮೀಜಿಗಳ ಭವ್ಯ ಸ್ವಾಗತಕ್ಕಾಗಿ ನಗರದ ಮಹದೇವಪೇಟೆ ಹಾಗೂ ಶ್ರೀಚೌಡೇಶ್ವರಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಆಕರ್ಷಣೀಯವಾಗಿ ಅಲಂಕಾರಗೊಳಿಸಲಾಗಿದೆ.