ಸೋಮವಾರಪೇಟೆ, ಜ. ೭: ಸಮೀಪದ ಕಿಬ್ಬೆಟ್ಟ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ತಾ. ೮ ರಂದು (ಇಂದು) ಶ್ರೀ ಗಣಪತಿ, ಶ್ರೀ ಭಗವತಿ ಹಾಗೂ ಧರ್ಮಶಾಸ್ತ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕ ಮಹಾಪೂಜೆ ನಡೆಯಲಿದೆ.

ವಾರ್ಷಿಕೋತ್ಸವ ಪ್ರಯುಕ್ತ ದೇವಾಲಯದಲ್ಲಿ ದೀಪಾರಾಧನೆ ಮತ್ತು ಹತ್ತಾಳ ಪೂಜೆ ನಡೆಯಿತು. ನಂತರ ಭಗವತಿ ದೇವಿಗೆ ಮಹಾಗುರೂದಿ ಹಾಗೂ ಮಹಾಮಂಗಳಾರತಿ ನಡೆಯಿತು.

ತಾ. ೮ ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಉಷಾಃ ಪೂಜೆ, ಅಷ್ಟಾಭಿಷೇಕ ಹಾಗೂ ಉಚ್ಛಪೂಜೆ ನಡೆಯಲಿದೆ. ೧೧ ಗಂಟೆಗೆ ಶನಿದೋಷ ನಿವಾರಣಕ್ಕಾಗಿ ಸರ್ವರೋಗ ಶಮನ, ಸರ್ವ ಐಶ್ವರ್ಯಕ್ಕಾಗಿ ಸಹಸ್ರ ನೀರಾಂಜನ ಪೂಜೆ ನಡೆಯಲಿದೆ. ಕೇರಳದ ಕಣ್ಣೂರು ತಂತ್ರಿಗಳಾದ ಹರಿಕೃಷ್ಣನ್ ನಂಬೂದರಿ ಹಾಗೂ ನಿತ್ಯ ಅರ್ಚಕ ಜಗದೀಶ್ ಅವರುಗಳ ಪೌರೋಹಿತ್ವದಲ್ಲಿ ಪೂಜೆಗಳು ನಡೆಯಲಿವೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಿ. ಜಗನ್ನಾಥ್ ತಿಳಿಸಿದ್ದಾರೆ.