ಮಡಿಕೇರಿ, ಜ. ೭: ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ಸದಸ್ಯರು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರನ್ನು ಭೇಟಿಯಾಗಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಕ್ರೀಡೆಯ ಕುರಿತು ಚರ್ಚೆ ನಡೆಸಿದರು.

ಅಧ್ಯಕ್ಷ ಬಾಲಾಡಿ ಮನೋಜ್ ನೇತೃತ್ವದಲ್ಲಿ ಶಾಸಕ ಮಂತರ್ ಗೌಡ ಅವರನ್ನು ಕುಶಾಲನಗರದ ವಿಶ್ರಾಂತಿ ಗೃಹದಲ್ಲಿ ಭೇಟಿಯಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುವ ಒಲಂಪಿಕ್ ಮಾದರಿಯ ಕ್ರೀಡಾಕೂಟದ ಕುರಿತು ಚರ್ಚಿಸಲಾಯಿತು.

ಈ ಬಾರಿ ಏಪ್ರಿಲ್ ೨೭ ರಿಂದ ಮೇ ೧೭ ರವರೆಗೆ ಗೌಡ ಸಮುದಾಯಗಳ ನಡುವೆ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ ಮೊದಲ ವರ್ಷದ ರಿಂಕ್ ಹಾಕಿ, ಶೂಟಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯತೆಯ ಪೈಪೋಟಿ, ಮಿಸ್ಟರ್ ಗೌಡ ಮಿಸ್ ಗೌಡತಿ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಶಾಸಕರ ಸಹಕಾರಕ್ಕೆ ಮನವಿ ಮಾಡಲಾಯಿತು.

ಇದಕ್ಕೆ ಸ್ಪಂದಿಸಿದ ಶಾಸಕರು ಕ್ರೀಡೆಯ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಸಹಕಾರ ನೀಡುವಂತೆ ತಿಳಿಸಿದ್ದು ವೇದಿಕೆಯ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದರು. ಈ ಸಂದರ್ಭ ಯುವ ವೇದಿಕೆ ಉಪಾಧ್ಯಕ್ಷ ಪರಿಚನ ಸತೀಶ್, ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಹಾಗೂ ಕೆದಂಬಾಡಿ ಕಾಂಚನ, ಖಜಾಂಚಿ ನವೀನ್ ದೇರಳ, ಸಹ ಕಾರ್ಯದರ್ಶಿ ಸೋನಿ ಹಾಗೂ ಕವನ್ ಕೊತ್ತೋಳಿ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಶಿಸ್ತು ಸಮಿತಿ ಅಧ್ಯಕ್ಷ ಪಟ್ಟಡ ದೀಪಕ್, ನಿರ್ದೇಶಕರುಗಳಾದ ಅನುದೀಪ್ ಕಲ್ಲುಮುಟ್ಲು, ಜೈನಿರಾ ಲೋಹಿತ್, ಮುದಿಯಾರ್ ಗಣೇಶ್, ಪ್ರಚಾರ ಸಮಿತಿಯ ಮಾಗುಲು ಲೋಹಿತ್ ಹಾಗೂ ವಿನೋದ್ ಮೂಡಗದ್ದೆ ಇದ್ದರು.