ಶನಿವಾರಸಂತೆ, ಜ. ೮: ಭರವಸೆಯಿಂದ ಜೆಸಿಐನ ಸದಸ್ಯನಾದರೆ ವ್ಯಕ್ತಿತ್ವ ವಿಕಸನದ ಜತೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂದು ಜೆಸಿಐ ಇಂಡಿಯಾ ವಲಯ ೧೪ ರ ಅಧ್ಯಕ್ಷ ಪ್ರಜ್ವಲ್ ಎಸ್. ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಚಿನ್ನಳ್ಳಿ ರಸ್ತೆಯ ಖಾಸಗಿ ರೆಸಾರ್ಟ್ನ ಸಭಾಂಗಣದಲ್ಲಿ ನಡೆದ ಜೆಸಿಐ ಶನಿವಾರಸಂತೆ ಸಿರಿ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಪರಿಕಲ್ಪನೆಗೆ ಒಳಗಾಗಿ ಜೆಸಿಯ ಓರ್ವ ಸದಸ್ಯ ಉನ್ನತ ಸ್ಥಾನ ಗಳಿಸಿ ನಾಯಕನಾಗಿ ರೂಪುಗೊಳ್ಳಬಹುದು. ಮೊದಲು ವ್ಯಕ್ತಿ ಉದ್ಧಾರವಾದರೆ ಮನೆ-ಮಠ, ಊರು, ಸಮಾಜ, ದೇಶ ಬದಲಾಗುತ್ತದೆ.ಉತ್ತಮ ನಾಗರಿಕನಾಗಿ ಸಂಘಟನೆಯಿAದ ಜೀವನ ನೋಡುವ ರೀತಿ ಬದಲಾಗುತ್ತದೆ ಎಂದರು.
ಸ್ಥಾಪನಾ ಅಧಿಕಾರಿ ಜೆಸಿಐ ಇಂಡಿಯಾ ವಲಯ ೧೪ ರ ಉಪಾಧ್ಯಕ್ಷ ವಿ.ಎಸ್. ಅಶೋಕ್ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿ, ಜೆಸಿಐ ಸಂಸ್ಥೆ ವ್ಯಕ್ತಿಯ ಜೀವನಕ್ಕೆ, ಬದುಕು ನಿರ್ವಹಣೆಗೆ ಮಾರ್ಗದರ್ಶನ ನೀಡುತ್ತದೆ. ಇದು ನಾಯಕತ್ವ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದರು.
ಗೌರವ ಅತಿಥಿ, ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ಜೆಸಿಐ ಎಂದರೆ ಯುವಜನತೆಯ ಅಂತರರಾಷ್ಟಿçÃಯ ಲಾಭ ರಹಿತ ಸಂಸ್ಥೆಯಾಗಿದ್ದು, ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ಭಾವನಾತ್ಮಕ ಮನೋಭಾವ ಮತ್ತು ವರ್ತನಾತ್ಮಕ ಪ್ರಕ್ರಿಯೆಯ ಮಾದರಿಗಳ ನಿರ್ದಿಷ್ಟ ಯೋಜನೆಯಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ನಿಕಟಪೂರ್ವ ವಲಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಜೆಸಿಐ ನಾನು ಎಂಬ ಅಹಂಭಾವವನ್ನು ದೂರಿಕರಿಸುವುದರ ಜತೆಗೆ ಸವಾಲನ್ನು ಸ್ವೀಕರಿಸಿ ಬೆಳೆಯುವ ಅವಕಾಶ ಕಲ್ಪಿಸಿ ವ್ಯಕ್ತಿಯನ್ನು ವ್ಯಕ್ತಿತ್ವವುಳ್ಳವನಾಗಿಸುತ್ತದೆ ಎಂದರು.
ಈ ಸಂದರ್ಭ ೨೦೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಜೆಸಿ ಸಿ. ರವಿ ಮಾತನಾಡಿ, ಯುವ ಜನತೆಯ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುತ್ತಾ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಜೆಸಿಐ ಕುಶಾಲನಗರ ಕಾವೇರಿ ಸ್ಪಾನ್ಸರ್ ಲೋಕಲ್ ಅಧ್ಯಕ್ಷೆ ತೇಜ ದಿನೇಶ್ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಶನಿವಾರಸಂತೆ ಯುವ ಸಮುದಾಯದ ನಾಯಕತ್ವ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ನೂತನ ಜೆಸಿಐ ಸಂಸ್ಥೆ ಹೊಸ ಉತ್ಸಾಹ ತುಂಬಲಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಜೆಸಿಐ ಶನಿವಾರಸಂತೆ ಸಿರಿ ನೂತನ ಕಾರ್ಯದರ್ಶಿ ಸಿ.ಎಸ್. ಪ್ರತಾಪ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಪುನೀತ್ ತಾಳೂರು, ಜೆಸಿ ಸದಸ್ಯರಾದ ರಜನಿಕಾಂತ್, ಶ್ರೀನಿವಾಸ್, ಗಿರೀಶ್, ರುಬಿನಾ, ಮಾಯದೇವಿ, ಜಗದೀಶ್, ರುದ್ರೇಶ್, ಜಗದಾಂಬ ಉಪಸ್ಥಿತರಿದ್ದರು. ರಜನಿಕಾಂತ್ ಸ್ವಾಗತಿಸಿ, ಪ್ರತಾಪ್ ವಂದಿಸಿದರು.