ಕೂಡಿಗೆ, ಜ. ೮: ದುಬಾರೆ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಐಟಿಡಿಪಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸಮರ್ಪಕವಾದ ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ, ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ.ಚಂದ್ರ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿಯ ಸಭೆಯಲ್ಲಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ತೇಜರಾಜ್ ಹಲಸಬಾಳ, ಕಚೇರಿ ಅಧೀಕ್ಷಕ ಪ್ರಶಾಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡ ಆರ್.ಕೆ. ಚಂದ್ರ ಅವರು ಹಾಡಿಗೆ ಕರೆದೊಯ್ದು ಖುದ್ದು ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಈ ಹಿಂದೆ ಸೋಲಾರ್ ಸಂಪರ್ಕ ನೀಡಿದ ಮಾರ್ಗಕ್ಕೆ ಹೊಸ ವಿದ್ಯುತ್ ಲೈನ್ ಜೋಡಣೆ ಮಾಡಲಾಗಿದೆ. ಇದು ಅವೈಜ್ಞಾನಿಕ ರೀತಿಯಲ್ಲಿದೆ. ವಿದ್ಯುತ್ ಲೈನ್ ಕೈಗೆಟಕುವ ರೀತಿಯಲ್ಲಿ ಗಿಡಗಳಿಗೆ ಹೊಂದಿಕೊAಡAತೆ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಅವಘಡಗಳು ಉಂಟಾಗುವ ಸಂಭವ ಅಧಿಕವಿದೆ. ಕೂಡಲೆ ಮುಖ್ಯಲೈನ್ನಿಂದ ಸಮರ್ಪಕ ರೀತಿಯಲ್ಲಿ ಮನೆಗೆ ಹೊಸದಾಗಿ ಅಂಡರ್ ಗ್ರೌಂಡ್ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆಗಳಿಗೆ ಕುಡಿಯುವ ನೀರು ಒದಗಿಸಲು ನಲ್ಲಿಗೆ ಪೈಪ್ ಲೈನ್ ಜೋಡಣೆ ಮಾಡದೆ ನೆಲದಿಂದಲೇ ನೀರು ಪಡೆದುಕೊಳ್ಳುವಂತೆ ಸ್ಥಿತಿ ಉಂಟುಮಾಡಲಾಗಿದೆ. ಕಾಡಿನ ವಾಸಿಗಳಿಗೆ ಸೌಲಭ್ಯ ಲಭ್ಯವಾದರೂ ಕಾಟಾಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಆರ್.ಕೆ.ಚಂದ್ರ ಅವರು ಆರೋಪಿಸಿದರು.
ಹಲವು ಕುಟುಂಬಗಳು ಇನ್ನೂ ಕೂಡ ಪ್ಲಾಸ್ಟಿಕ್ ಜೋಪಡಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಮನೆ ಮಂಜೂರಾದರೂ ತಾಂತ್ರಿಕ ಸಮಸ್ಯೆ ಕಾರಣ ಹಲವರಿಗೆ ಹಣ ಬಿಡುಗಡೆಯಾಗುತ್ತಿಲ್ಲ, ಹಾಡಿಯಿಂದ ಸಿದ್ದಾಪುರ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದುವರೆಗೆ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು. ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಅಧಿಕಾರಿಗಳು ಈ ಬಗ್ಗೆ ಕೂಲಕಂಶವಾಗಿ ಪರಿಶೀಲನೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸರಕಾರದ ಯೋಜನೆಗಳು ಗಿರಿಜನರ ಅಭಿವೃದ್ಧಿಗೆ ಸಮಪರ್ಕವಾಗಿ ಒದಗಿಸುವಲ್ಲಿ ನಿರ್ಲಕ್ಷö್ಯ ವಹಿಸದಂತೆ ಆರ್.ಕೆ.ಚಂದ್ರ ಮನವಿ ಮಾಡಿದರು. ಐಟಿಡಿಪಿ ಅಧಿಕಾರಿ ತೇಜರಾಜ ಮಾತನಾಡಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗಿದೆ. ಅವುಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ಈಗಾಗಲೆ ಈ ಹಾಡಿಯಲ್ಲಿ ಕೊಳವೆ ಬಾವಿ ಮತ್ತು ಓವರ್ ಹೆಡ್ ವಾಟರ್ ಟ್ಯಾಂಕ್ಗೆ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆಯಿಲ್ಲದವರ ಪಟ್ಟಿ ಸಿದ್ದಪಡಿಸಿ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.