ಮಡಿಕೇರಿ ಜ.೭: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ, ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ರೈಸಿಂಗ್ ಅಂಡ್ ಎಕ್ಸಲರೇಟಿಂಗ್ ಎಂಎಸ್‌ಎAಇ ಫರ್‌ಫಾರ್ಮೆನ್ಸ್ ರ‍್ಯಾಂಪ್) ರಡಿ ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‌ಇಎಎನ್ ಯೋಜನೆ ಕುರಿತು ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ವಾಸವಿ ಸಪ್ತಾಹ ಅಂಗವಾಗಿ ಎಂಎಸ್‌ಎAಇ ಉದ್ದಿಮೆದಾರರಿಗೆ ಒಂದು ದಿನದ ಅರಿವು ಕಾರ್ಯಾಗಾರ ಬುಧವಾರ ನಡೆಯಿತು.
ಕಾರ್ಯಾಗಾರವನ್ನು ಕುಶಾಲನಗರ ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷ ಪ್ರವೀಣ್ ಎ.ಎನ್. ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಬೆಂಗಳೂರು ಟೆಕ್ಸಾಕ್ ಮುಖ್ಯ ಸಲಹೆಗಾರರು ಹಾಗೂ ಸಿಇಒ ಸಿದ್ದರಾಜು ಅವರು ರ‍್ಯಾಂಪ್ ಯೋಜನೆಯ ಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು.
ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ. ಹನುಮಂತರಾಯ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಪಿ., ಕೆ.ಎಸ್.ಎಫ್.ಸಿ, ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸಿ.ಎನ್.ರಘು ಉಪಸ್ಥಿತರಿದ್ದರು. ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‌ಇಎಎನ್ ಯೋಜನೆಯ ಕಾರ್ಯಾಗಾರದ ಬಗ್ಗೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಕ್ರಿಯಟಿವ್ ಇಂಪೆಕ್ಸ್ ಶ್ರೀಕಾಂತ್ ಬಿ. ತಾಂತ್ರಿಕ ಉಪನ್ಯಾಸ ನೀಡಿದರು.