ಮಡಿಕೇರಿ, ಜ. ೭: ನಾಗರಿಕ ಸುರಕ್ಷೆ ಮತ್ತು ಸಂಭಾವ್ಯ ಉಗ್ರ ಕೃತ್ಯಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಂದು ಮಡಿಕೇರಿಯ ಬಸ್ ನಿಲ್ದಾಣ, ನ್ಯಾಯಾಲಯ, ಮತ್ತಿತರ ಕಚೇರಿಗಳಲ್ಲಿ ಜಿಲ್ಲಾ ಪೊಲೀಸ್ ಘಟಕದ ಸ್ಫೋಟಕ ಪತ್ತೆ ದಳದಿಂದ ಸ್ಫೋಟಕ ಪತ್ತೆ ಕಾರ್ಯ ನಡೆಯಿತು.