ಚೆಟ್ಟಳ್ಳಿ, ಜ. ೯: ಬೇಸಿಗೆಯ ಅವಧಿಯಲ್ಲಿ ಸಂಭವಿಸಬಹುದಾದ ಕಾಡ್ಗಿಚ್ಚುಗಳನ್ನು ತಡೆಗಟ್ಟುವ ಉದ್ದೇಶದಿಂದ ಕುಶಾಲನಗರ ವಲಯದ ಅತ್ತೂರು, ಆನೆಕಾಡು, ದುಬಾರೆ, ಮೀನುಕೊಲ್ಲಿ ಹಾಗೂ ಮಾಲ್ದಾರೆ ಮೀಸಲು ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಕಿರೇಖೆ (ಫೈರ್ಲೈನ್) ನಿರ್ವಹಣಾ ಕಾರ್ಯ ಆರಂಭಿಸಲಾಗಿದೆ.ಅರಣ್ಯದ ಸಂವೇದನಾಶೀಲ ಪ್ರದೇಶಗಳಲ್ಲಿ ಒಣಎಲೆ, ಹುಲ್ಲು ಹಾಗೂ ಕಾಡುಪೊದೆಗಳನ್ನು ತೆರವುಗೊಳಿಸಿ ಅಗಲವಾದ ಬೆಂಕಿರೇಖೆ ನಿರ್ಮಿಸಲಾಗುತ್ತಿದ್ದು, ಬೆಂಕಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯಾಪಿಸುವುದನ್ನು ತಡೆಯಲು ಇದು ಸಹಕಾರಿಯಾಗಲಿದೆ.
ಈ ಬಾರಿಯೂ ಬೆಂಕಿರೇಖೆ ಕಾರ್ಯ ಪ್ರಾರಂಭಗೊAಡಿದ್ದು, ಮೊದಲ ಹಂತದಲ್ಲಿ ಕುರುಚಲು ಕಾಡನ್ನು ತೆರವುಗೊಳಿಸಲಾಗಿದೆ. ಎರಡನೇ ಹಂತವಾಗಿ ಮುಂದಿನ ಒಂದು ವಾರದೊಳಗೆ ಸಂಪೂರ್ಣ ಬೆಂಕಿರೇಖೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದ್ದಾರೆ.
ಬೇಸಿಗೆಯ ಕಾಲದಲ್ಲಿ ಅರಣ್ಯಕ್ಕೆ ಹೊಂದಿಕೊAಡ ಪ್ರದೇಶಗಳಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚುವುದು, ನಿರ್ಲಕ್ಷö್ಯದಿಂದ ಸಿಗರೇಟ್ ಬಿಸಾಕುವುದನ್ನು ಸಂಪೂರ್ಣವಾಗಿ ತಡೆಯುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
- ಕರುಣ್ ಕಾಳಯ್ಯ