ಕೂಡಿಗೆ, ಜ. ೮: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಅನೇಕ ರೈತರು ತಮ್ಮ ಶೀತಪೀಡಿತ (ಜೊಗ್ಗು) ಜಮೀನಿನಲ್ಲಿ ಭತ್ತದ ಬೇಸಾಯ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭೂಮಿಯನ್ನು ಪಾಳುಬಿಡುವ ಬದಲು ಶೀತದ ಜಮೀನಿನಲ್ಲಿ ಭತ್ತದ ಬದಲು ಪರ್ಯಾಯವಾಗಿ ಅಡಿಕೆ ಬೇಸಾಯಕ್ಕೆ ಮುಂದಾಗಿ, ಜಿಲ್ಲೆಯಲ್ಲಿ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಅಡಿಕೆ ಬೆಳೆ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಅನೇಕ ರೈತರು ಅಡಿಕೆ ಗಿಡಗಳನ್ನು ನೆಟ್ಟು ಬೇಸಾಯ ಮಾಡಿ ಫಸಲು ಪಡೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಅನೇಕ ಗ್ರಾಮಗಳಲ್ಲಿ ಶೀತಪೀಡಿದ ಗದ್ದೆಗಳಲ್ಲಿ ರೈತರು ಭತ್ತದ ಬೆಳೆಯನ್ನು ಬೆಳೆಯುವುದರ ಬದಲು ವಾಣಿಜ್ಯ ಬೆಳೆಯಾದ ಅಡಿಕೆಯತ್ತ ಒಲವು ತೋರುತ್ತಿದ್ದಾರೆ.
ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೇಸಾಯವನ್ನು ತಮ್ಮ ಕುಟುಂಬದ ಆಹಾರಕ್ಕೆ ಬೇಕಾಗುವಷ್ಟು ಮಾತ್ರ ಬೆಳೆಯುತ್ತಿದ್ದಾರೆ. ಭತ್ತದ ಬೇಸಾಯಕ್ಕೆ ಕಾರ್ಮಿಕರ ಕೊರತೆ, ವ್ಯವಸಾಯಕ್ಕೆ ಹೆಚ್ಚು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಅಲ್ಲದೆ ಭತ್ತದ ಇಳುವರಿ ಕಡಿಮೆಯಾಗುತ್ತಿದೆ. ಜೊತೆಯಲ್ಲಿ ಅನೇಕ ಬಗೆಯ ರೋಗಗಳ ಕಾಟ ಎಂದು ಭತ್ತ ಮತ್ತು ಅಡಿಕೆ ಬೇಸಾಯ ಮಾಡಿದ ಅಚ್ಚುಕಟ್ಟು ಪ್ರದೇಶದ ಹೆಚ್.ಎಸ್. ರವಿ, ತೊರೆನೂರು ಮಹೇಶ್, ಗಣೇಶ್, ಕುಮಾರ್, ಜವರಪ್ಪ, ಭುವನಗಿರಿ ವಿಶ್ವನಾಥ, ಚಂದ್ರಶೇಖರ್, ನಾಗರಾಜ್, ಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಡಿಕೆ ಗಿಡಗಳನ್ನು ಶೀತದ ಪ್ರದೇಶದಲ್ಲಿ ನೆಟ್ಟು ಬೇಸಾಯ ಮಾಡಿದರೆ ನೀರಿನ ಕೊರತೆ ನಿಬಾಯಿಸಬಹುದು. ಜೊತೆಗೆ ಅಡಿಕೆ ಗಿಡಗಳನ್ನು ೧ ವರ್ಷದಿಂದ ೫ ವರ್ಷಗಳವರೆಗೆ ಬೇಸಾಯ ಮಾಡುವ ಮೂಲಕ ಸಾಗುವಳಿ ಮಾಡಿದರೆ ಗಿಡಗಳು ಉತ್ತಮವಾಗಿ ಬೆಳೆದು ೭ ವರ್ಷಗಳಲ್ಲಿ ಅಡಿಕೆ ಫಸಲನ್ನು ನೀಡುತ್ತವೆ.
೫ ವರ್ಷಗಳ ನಂತರ ಗಿಡಗಳು ಬೆಳೆಯುತ್ತಾ ವರ್ಷಗಳು ಕಳೆದಂತೆ ಉತ್ತಮ ಬೆಳೆಯನ್ನು ನೀಡುವುದರ ಜೊತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಲೆಯನ್ನು ಪಡೆಯುವ ಅವಕಾಶ ಬರುತ್ತದೆ.
ಅಡಿಕೆ ಬೆಳೆಯು ೩೦ ವರ್ಷಗಳವರೆಗೆ ಉತ್ತಮ ಬೆಳೆಯನ್ನು ನೀಡುತ್ತಾ ಬರುತ್ತವೆ, ಜೊತೆಗೆ ಅಡಿಕೆ ಬೆಳೆಗೆ ಈಗಾಗಲೇ ಉತ್ತಮವಾದ ಬೆಲೆ ರೈತರಿಗೆ ಸಿಗುತ್ತಿದೆ. ಜಿಲ್ಲೆಯ ಅಡಿಕೆ ಬೆಳೆಗೆ ಕ್ವಿಂಟಾಲ್ಗೆ ೬,೫೦೦ ರೂಪಾಯಿಗಳಷ್ಟು ಬೆಲೆ ಇದೆ. ಕಾರ್ಮಿಕರ ಕೊರತೆ ನಡುವೆ ರೈತರು ಅಡಿಕೆ ಬೆಳೆಯತ್ತ ಮುಖಮಾಡಿದ್ದಾರೆ. ಅದರ ಒಳಗೆ ಅನೇಕ ರೈತರು ಕಾಫಿ ಗಿಡಗಳನ್ನು ನೆಟ್ಟ ಬೇಸಾಯ ಮಾಡುತ್ತಿದ್ದಾರೆ. ಚಿಕ್ಕ ಅಡಿಕೆ ಗಿಡಗಳಿಗೆ ನೆರಳು ಸಿಗುವುದಕ್ಕೆ ಬಾಳೆ ಗಿಡಗಳನ್ನು ನೆಟ್ಟು ಬೇಸಾಯ ಮಾಡುತ್ತಿದ್ದಾರೆ.
ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಶುಂಠಿ, ಸಹಿ ಗೆಣಸು ಜೊತೆಗೆ ಹತ್ತಾರು ವರ್ಷಗಳ ಬೆಳೆಯಾದ ಅಡಿಕೆ ಬೆಳೆಯನ್ನು ಬೆಳೆಯಲು ಜಿಲ್ಲೆಯ ರೈತರು ಮುಂದಾಗಿರುವುದು ಕಂಡುಬರುತ್ತಿದೆ. ಒಂದು ಎಕರೆ ಪ್ರದೇಶದ ಅಡಿಕೆ ಬೆಳೆಯಲ್ಲಿ ೫ ಲಕ್ಷಕ್ಕೂ ಅಧಿಕ ಹಣವನ್ನು ಗಳಿಸಬಹುದಾಗಿದೆ. ಜಿಲ್ಲೆಯ ರೈತರು ಪುತ್ತೂರು ಮತ್ತು ಶಿವಮೊಗ್ಗ ಅಡಿಕೆ ತಳಿಯ ಗಿಡಗಳನ್ನು ನೆಟ್ಟು ಬೇಸಾಯ ಮಾಡುತ್ತಿರುವುದರಿಂದ ಉತ್ತಮವಾದ ಬೆಳೆಯ ಜೊತೆಗೆ ಕೊಡಗು ಜಿಲ್ಲೆಯ ಅಡಿಕೆಗೆ ಬೇಡಿಕೆ ಇದೆ. ರಾಜ್ಯದ ಅಡಿಕೆಗೆ ದೇಶದಲ್ಲಿ ಬೇಡಿಕೆ ಇರುವುದರಿಂದ ಮತ್ತು ರಾಷ್ಟಿçÃಯ, ಅಂತರರಾಷ್ಟಿçÃಯ ಮಟ್ಟದಲ್ಲಿ ಅಡಿಕೆಗೆ ಹೆಚ್ಚು ಬೇಡಿಕೆ ಕಂಡುಬರುತ್ತಿರುವುದರಿAದಾಗಿ ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆಯು ಸಿಗುತ್ತಿದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದಾರೆ. ಅಡಿಕೆ ಬೆಳೆಯನ್ನು ಕಟಾವು ಮಾಡಲು ಹಾಸನ ಮತ್ತು ಮೈಸೂರು ಜಿಲ್ಲೆಯ ಕಾರ್ಮಿಕರಿಗೆ ನೀಡಿರುವ ಅಚ್ಚುಕಟ್ಟು ಪ್ರದೇಶ ರೈತರು ತಮ್ಮ ಅನುಭವ ಹಂಚಿಕೊAಡಿದ್ದಾರೆ.