ಮಡಿಕೇರಿ, ಜ. ೯: ಸಪ್ನಾ ಪುಸ್ತಕ ಪ್ರಕಾಶನ ಬೆಂಗಳೂರು, ತಮ್ಮ ರಾಜ್ಯೋತ್ಸವ ಪ್ರಕಟಣೆ ಅಂಗವಾಗಿ ನಾಡಿನ ೭೦ ಶ್ರೇಷ್ಠ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಮೂಲತಃ ಕೊಡಗಿನ ಜಯಪ್ರಕಾಶ ರಾವ್ ಅವರ ೮ನೇ ಕೃತಿ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಎಂಬ ಯುವಜನ ಪ್ರಗತಿ ಪ್ರೇರಕ ಪುಸ್ತಕ ಕೂಡಾ ಬಿಡುಗಡೆಗೊಂಡಿತು.

ಜಯಪ್ರಕಾಶ್ ರಾವ್ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಆಖಆಔದ ನಿವೃತ್ತ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಡಾ. ಕಲಂ ಅವರ ಶಿಷ್ಟಾಚಾರ ಅಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ರಾಷ್ಟçಮಟ್ಟದಲ್ಲಿ ಹೆಸರು ಮಾಡಿದ ಎಚಿಥಿಛಿess ತರಬೇತಿ ಶ್ರೇಷ್ಠರಾಗಿ ೩೦ ವರ್ಷಗಳಲ್ಲಿ ೫೦೦ ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮ ನೀಡಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟçಮಟ್ಟದ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾವ್ ,ತಮ್ಮ ನಿವೃತ್ತಿ ಜೀವನದಲ್ಲಿ ಕೂಡ ಪ್ರಸ್ತುತ ಹವ್ಯಾಸಿ, ಗೌರವ ಪ್ರಾಚಾರ್ಯರಾಗಿ ನಾಡಿನ ಪೊಲೀಸ್ ಅಕಾಡೆಮಿ, ಬ್ಯಾಂಕ್, ರಾಜ್ಯ ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುತ್ತಾರೆ. ರಾವ್ ಮೂಲತಃ ತಲಕಾವೇರಿ ಆಚಾರ್ಯ ಕುಟುಂಬದ ಸದಸ್ಯರೂ ಆಗಿದ್ದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.