ಸುಂಟಿಕೊಪ್ಪ, ಜ. ೯: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬಸವನಹಳ್ಳಿಯ ಸಿರಕಜೆ ಮೌಲ್ಯ ಶ್ರೀಧರ್ ಅವರು ಎರಡು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಇವರು ಮೈಸೂರಿನ ಮಾನಸಗಂಗೋತ್ರಿಯ ಅಣು ಜೈವಿಕ ಶಾಸ್ತç ವಿಭಾಗದಲ್ಲಿ ಎಂಎಸ್ಸಿ ಪೂರೈಸಿದ್ದಾರೆ.
ಇತ್ತೀಚೆಗೆ ನಡೆದ ವಿವಿಯ ಘಟಿಕೋತ್ಸವದಲ್ಲಿ ಮೌಲ್ಯ ಶ್ರೀಧರ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಎರಡು ಚಿನ್ನದ ಪದಕ ಪಡೆದುಕೊಂಡರು.
ಮೌಲ್ಯ ಕುಶಾಲ ನಗರ ಸಮೀಪದ ಬಸವನಹಳ್ಳಿಯ ಸಿರಕಜೆ ಶ್ರೀಧರ್ ಮತ್ತು ಮೋಹಿನಿ ದಂಪತಿ ಪುತ್ರಿ.