ಶನಿವಾರಸಂತೆ, ಜ. ೧೦: ದೆಹಲಿಯಲ್ಲಿ ತಾ. ೨೬ ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದ ಯುವತಿ ಜೆ.ಡಿ. ಸ್ವಾತಿ ಆಯ್ಕೆಯಾಗಿದ್ದಾರೆ.

ಮೈಸೂರಿನ ಸೆಂಟ್ ಫಿಲೋಮಿನಾಸ್ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ಎನ್.ಸಿ.ಸಿ.ಯಿಂದ ಜೂನಿಯರ್ ಅಂಡರ್ ಆಫೀಸರ್ ಆಗಿ ತಾ. ೨೬ ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಜೆ.ಡಿ. ಸ್ವಾತಿ ಬೆಳ್ಳಾರಳ್ಳಿ ಗ್ರಾಮದ ಎಲೆಕ್ಟಿçಷಿಯನ್ ಹಾಗೂ ಕೃಷಿಕ ಬಿ.ಎಸ್. ದೇವರಾಜು-ನಯನ ದಂಪತಿಯ ಪುತ್ರಿ.