ಸೋಮವಾರಪೇಟೆ, ಜ. ೧೦: ರಾಜ್ಯದಾದ್ಯಂತ ರಾಜ್ಯ ಸರ್ಕಾರ ಡಿಜಿಟಲ್ ಇ ಸ್ಟಾಂಪ್ ಸೇವೆ ಜಾರಿಗೆ ತರುತ್ತಿದ್ದು, ಇಲ್ಲಿನ ಉಪ ನೋಂದಣಾ ಕಚೇರಿಯಲ್ಲಿ ತಾ. ೧೨ರಂದು(ನಾಳೆ) ಮಧ್ಯಾಹ್ನ ೧ ಗಂಟೆಗೆ ಡಿಜಿಟಲ್ ಇ- ಸ್ಟಾಂಪ್ ಸಂಬAಧ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿಜಿಟಲ್ ಇ-ಸ್ಟಾಂಪ್ ಬಳಕೆದಾರರು ಹಾಗೂ ಸಾರ್ವಜನಿಕರು ತರಬೇತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಬಹುದು ಎಂದು ಉಪ ನೋಂದಣಾಧಿಕಾರಿ ಚನ್ನನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.