ಕುಶಾಲನಗರ, ಜ. ೧೦: ವಾಹನಗಳ ನೋಂದಣಿ ನಿಯಮಗಳನ್ನು ಉಲ್ಲಂಘಿಸಿ ದ್ವಿಚಕ್ರ ವಾಹನ ಪರಿವರ್ತನೆ ಮಾಡುವುದರೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸರು ಬೈಕ್ ಸವಾರನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಕುಶಾಲನಗರ ಸಮೀಪದ ಜನತಾ ಕಾಲೋನಿ, ನಿವಾಸಿ ಆಸಿಫ್ ಎಂಬಾತ ಕೆಎ ೧೨ವಿ ೮೫೧೪ ನೋಂದಣಿಯ ದ್ವಿಚಕ್ರ ವಾಹನ ಯಮಹಾ ಮೋಟಾರ್ ಸೈಕಲ್ ನಿಯಮ ಉಲ್ಲಂಘಿಸಿ ಪರಿವರ್ತನೆ ಮಾಡಿ ಕುಶಾಲನಗರ ಪಟ್ಟಣ ಮೂಲಕ ಹಾದು ಹೋಗುವ ಹೆದ್ದಾರಿ ರಸ್ತೆಯಲ್ಲಿ ವೀಲಿಂಗ್ ಮಾಡುವ ಮೂಲಕ ಸಾರ್ವಜನಿಕರ ಮತ್ತು ವಾಹನಗಳ ಹೋರಾಟಕ್ಕೆ ತೊಂದರೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಆತನನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಪರಾರಿಯಾಗಿದ್ದು ತಕ್ಷಣ ಪೊಲೀಸರು ಹಿಂಬಾಲಿಸಿ ವಾಹನ ಪತ್ತೆಹಚ್ಚಿ ವಾಹನವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕ್ಕದಮ್ಮೆ ದಾಖಲಿಸಿಕೊಂಡಿದ್ದಾರೆ.