ಕೂಡಿಗೆ, ಜ. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರದ ಗ್ರಾಮದ ಸರ್ವೆ ನಂಬರ್ ೩೧/೧ ರಲ್ಲಿ ದೇವಾಲಯ ಆವರಣದಲ್ಲಿ ಹಾಕಲಾಗಿದ್ದ ಬೇಲಿಯನ್ನು ತೆರವು ಮಾಡಿರುವ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸುಂದರನಗರದ ಸರ್ವೆ ನಂಬರ್ ೩೧/೧ ಜಾಗದಲ್ಲಿ ದೇವಸ್ಥಾನಕ್ಕೆ ಎಂದು ಕಾಯ್ದಿರಿಸಿದ್ದ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ಸಂಬAಧಿಸಿದವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯಿದ್ದ ಸರ್ವೆ ನಂಬರ್ ೩೧ ಇದೀಗ ೩೧/೧ ಆಗಿದೆ. ಈ ಸ್ಥಳದಲ್ಲಿ ನೂರಾರು ಕುಟುಂಬಗಳು ಹಲವು ದಶಕಗಳಿಂದ ವಾಸವಿದ್ದು, ಅರಣ್ಯ ಇಲಾಖೆಯವರು ಇದೀಗ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಈ ಬಗ್ಗೆ ಸಂಬAಧಿಸಿದವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಕೆ.ಬಿ. ಷಂಶುದ್ದೀನ್, ಗ್ರಾಮಸ್ಥರಾದ ಎಚ್.ಅಣ್ಣಯ್ಯ ಸುಕುಮಾರ್ ಮಾತನಾಡಿ, ಸರ್ವೆ ನಂಬರ್೩೧/೧ ರಲ್ಲಿ ಕಳೆದ ೪೦ ವರ್ಷಗಳಿಂದ ಗ್ರಾಮಸ್ಥರು ವಾಸವಿದ್ದಾರೆ. ಇದೀಗ ಅರಣ್ಯ ಇಲಾಖೆಯವರು ಇಲಾಖೆಯ ಜಾಗ ಎಂದು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಇದು ಮುಂದುವರೆದಲ್ಲಿ ಅರಣ್ಯ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಮಸ್ಥರಾದ ರಮೇಶ್, ಗಿರೀಶ್ ಕುಮಾರ್, ಮಹದೇವಮ್ಮ, ಸುಶೀಲ, ನಾಗಿ, ಪಲ್ಲವಿ ಹಾಗೂ ಇನ್ನಿತರರು ಇದ್ದರು.