ಸೋಮವಾರಪೇಟೆ, ಜ. ೧೦: ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಸಂಕ್ರಾAತಿ ಹಬ್ಬದ ಪ್ರಯುಕ್ತ ಜಾನಪದ ಸಂಭ್ರಮ ಕಾರ್ಯಕ್ರಮ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಮಹಿಳಾ ಸದಸ್ಯರು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಅನೇಕ ಸದಸ್ಯರು ಜನಪದ ಗೀತೆಗಳು ಹಾಗೂ ಭಾವಗೀತೆಗಳನ್ನು ಹಾಡಿದರು. ವೇದಿಕೆಯ ಅಧ್ಯಕ್ಷೆ ಚಂದ್ರಿಕಾ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಸಂಸ್ಕೃತಿ ನಮ್ಮ ನೆಲದ ಮೂಲ ಶಕ್ತಿ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಅನಿತಾ ಅನಂದ್, ಉಪಾಧ್ಯಕ್ಷೆ ಹಂಸ ಭರತ್, ಖಜಾಂಚಿ ಜಾನ್ಸಿ ಗಿರೀಶ್, ಶಾಲಾ ಭಾತ್ಮೀದಾರರಾದ ಸಂಗೀತ ದಿನೇಶ್ ಸೇರಿದಂತೆ ಪದಾಧಿಕಾರಿಗಳು ಇದ್ದರು. ಸದಸ್ಯರು ಸಂಕ್ರಾAತಿ ಹಬ್ಬದ ಸಂದೇಶವಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜಾನಪದ ಪರಿಷತ್ನ ಎಸ್.ಎ. ಮುರುಳೀಧರ್, ಸುಮತಿ, ಶರ್ಮಿಳಾ ರಮೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.