ಮಡಿಕೇರಿ, ಜ. ೧೦: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ೩೬ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವ ತಾ.೧೪ರಂದು ನಡೆಯಲಿದೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ ಸುಧೀರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೩ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಇತ್ಯಾದಿ ಸೇವೆಗಳು ನಡೆಯಲಿವೆ.

ತಾ.೧೪ರÀಂದು ಬೆಳಿಗ್ಗೆ ೬.೩೦ಕ್ಕೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ೭ ಗಂಟೆಗೆ ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ, ೭.೩೦ರಿಂದ ಪಂಚಾಮೃತಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ತುಲಾಭಾರ ಸೇವೆ ನಡೆಯಲಿದೆ. ೮.೩೦ ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ವೆಳ್ಳಾಟಂ, ೯ ಗಂಟೆಗೆ ಶ್ರೀ ಮುತ್ತಪ್ಪದೇವರ ವೆಳ್ಳಾಟಂ, ೧೦ ಗಂಟೆಗೆ ಶ್ರೀ ಪೋದಿದೇವರ ವೆಳ್ಳಾಟಂ, ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, ೧೧ ಗಂಟೆಗೆ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಧ್ಯಾಹ್ನ ೧೨ ಗಂಟೆಗೆೆ ಶ್ರೀ ಗುಳಿಗದೇವರ ವೆಳ್ಳಾಟಂ, ೧೨.೩೦ ಗಂಟೆಗೆ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.

ಸಂಜೆ ೬ ಗಂಟೆಯಿAದ ಭಜನಾ ಕಾರ್ಯಕ್ರಮ, ರಾತ್ರಿ ೭ ಗಂಟೆಗೆÉ ಅಲಂಕಾರ ಪೂಜೆ, ಪಡಿ ಪೂಜೆ, ೮ ಗಂಟೆಗೆ ದೀಪ ಆರಾಧನೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ಸುಧೀರ್ ಮಾಹಿತಿ ಇತ್ತರು.

ಗೋಷ್ಠಿಯಲ್ಲಿ ಅಯ್ಯಪ್ಪ ಉತ್ಸವ ಸಮಿತಿ ಅಧ್ಯಕ್ಷ ವಿ.ಎಸ್. ವಿನೋದ್, ಖಜಾಂಚಿ ಸದಾಶಿವ ಶೆಟ್ಟಿ, ಕಾರ್ಯದರ್ಶಿ ಪೂವಪ್ಪ, ಗೌರವಾಧ್ಯಕ್ಷರಾದ ಡಾ. ಎಂ.ಜಿ ಪಾಟ್ಕರ್, ಸಲಹೆಗಾರರಾದ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು