ಪೊನ್ನಂಪೇಟೆ, ಜ. ೧೦: ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆÀಮಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪ್ಯಾರ ಕಮಾಂಡೋ ಆಗಿ ಆಯ್ಕೆಯಾಗಿರುವ ಅಕಾಡೆÀಮಿಯ ವಿದ್ಯಾರ್ಥಿ, ವೀರಾಜಪೇಟೆ ತಾಲೂಕಿನ ಕೊಂಡAಗೇರಿ ಗ್ರಾಮದ ಮಂಜು ಹೆಚ್. ಆರ್ ಹಾಗೂ ಶೋಭಾ ದಂಪತಿಯ ಪುತ್ರ ಮನೋಜ್ ಹೆಚ್. ಆರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ತೆರೆದ ವಾಹನದಲ್ಲಿ ಮನೋಜ್ ಅವರನ್ನು ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಸಮೀಪದಿಂದ ಗೋಣಿಕೊಪ್ಪಲು ಉಮಾಮಹೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ಮನೋಜ್ ಈಗಾಗಲೇ ತರಬೇತಿ ಮುಗಿಸಿದ್ದು, ಜನವರಿ. ೧೫ ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಜ್ ಅವರು, ಆಸಕ್ತಿ ಹಾಗೂ ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯಿಂದ ಪಡೆದುಕೊಂಡ ತರಬೇತಿಯು ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶವನ್ನು ನನಗೆ ಒದಗಿಸಿಕೊಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಮತ್ತು ಕೋಚಿಂಗ್ ಅಕಾಡಮಿ ಅಧ್ಯಕ್ಷ, ಬ್ಲ್ಯಾಕ್ ಕ್ಯಾಟ್ ಕಮಾಂಡೋ ಇನ್ಸ್ಟ್ರಕ್ಟರ್, ಮಾಜಿ ಯೋಧ ಅಮ್ಮಣಿಚಂಡ ಲವನ್ ಮಾದಪ್ಪ ಮಾತನಾಡಿ, ಕರ್ನಾಟಕದ ಸೈನಿಕರ ಜಿಲ್ಲೆ ಎಂದು ಪ್ರಸಿದ್ಧಿ ಪಡೆದಿರುವ ಕೊಡಗು, ಭಾರತೀಯ ಸೈನ್ಯಕ್ಕೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಸೈನಿಕರನ್ನು ನೀಡಿರುವ ಜಿಲ್ಲೆ, ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಕಡಿಮೆಯಾಗುತ್ತಿದೆ.

ಆದ್ದರಿಂದ ಕೊಡಗಿನ ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವ ಸಲುವಾಗಿ ಈ ಅಕಾಡೆಮಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ನಮ್ಮ ಅಕಾಡಮಿಯಲ್ಲಿ ಎನ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಜೊತೆಗೆ ಮಿಲಿಟರಿ ಏರ್ ಫೋರ್ಸ್, ನೇವಿಗೆ ಸೇರಲು ಬೇಕಾದ ಎಲ್ಲಾ ರೀತಿಯ ತರಬೇತಿಯನ್ನು ಬಾಲಕರು ಹಾಗೂ ಬಾಲಕಿಯರಿಗೆ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭ ಅಕಾಡೆÀಮಿಯ ಸದಸ್ಯರಾದ ರವಿ ತಮ್ಮಯ್ಯ, ಮನೋಜ್ ಅವರ ತಂದೆ ಮಂಜು ಹೆಚ್. ಆರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಯೋಧ ಬಶೀರ್ ಎನ್. ಎಂ., ಸಂಯೋಜಕ ನರೇಂದ್ರ ಕೆ. ಪಿ, ಪೋಷಕರು ಹಾಗೂ ಅಕಾಡೆಮಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.