ಸುಂಟಿಕೊಪ್ಪ, ಜ. ೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷರಾಗಿ ಶಂಕರ ನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಹೆಚ್.ಕೆ.ಧರ್ಮ, ಸಹ ಕಾರ್ಯದರ್ಶಿಯಾಗಿ ದಯಾನಂದ ರೈ, ಖಜಾಂಜಿಯಾಗಿ ಕೆ.ಎಸ್. ವಿನೋದ್, ಕ್ರೀಡಾ ಕಾರ್ಯದರ್ಶಿಯಾಗಿ ಟಿ.ಕೆ. ಚಂದ್ರು, ಅಶೋಕ, ರವಿ ಪಿ.ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಸ್.ಬಿ. ಪ್ರವೀಣ್ ಕುಮಾರ್, ಗೌರವಾಧ್ಯಕ್ಷರಾಗಿ ಬಿ.ಎ. ವಸಂತ, ಸಲಹೆಗಾರರಾಗಿ ಕೆ.ಎಸ್.ಜಗದೀಶ್, ಬಿ.ಜಿ.ರಮೇಶ್, ಪಿ.ಟಿ. ಪೌಲಸ್, ಪಿ.ಎಸ್. ಅನಿಲ್‌ಕುಮಾರ್, ಪಿ.ಕೆ. ದಿನೇಶ್, ಕೆ.ಕೆ.ವಿಜೇಶ್, ಸಮಿತಿ ಸದಸ್ಯರುಗಳಾಗಿ ಎ.ಎಸ್. ಸಂದೀಪ್, ಪಿ.ಎಸ್. ಅಜಿತ್‌ಕುಮಾರ್ ಆಯ್ಕೆಗೊಂಡರು.