ಚೆಟ್ಟಳ್ಳಿ, ಜ. ೧೧: ಸಮೀಪದ ಅಭ್ಯತ್ ಮಂಗಲ(ಒAಟಿಯAಗಡಿ) ಸಮೀಪ ಆಟೋ ಮತ್ತು ಥಾರ್ ಜೀಪು ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಮತ್ತು ಆಟೋದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.

ಏಂ೧೨ ಒಃ ೯೨೫೩ ಮೋಹನ್ ಎಂಬವರು ಚಾಲಿಸುತ್ತಿದ್ದ ಥಾರ್ ಜೀಪ್ ಹಾಗೂ ಚೆಟ್ಟಳ್ಳಿಯ ಸಜೀರ್ ಎಂಬವರ ಆಟೋ (ಏಂ೧೨ ಅ ೪೬೭೮) ನಡುವೆ ಅಪಘಾತ ಸಂಭವಿಸಿದ್ದು, ಆಟೋಗೆ ಸಂಪೂರ್ಣ ಹಾನಿಯಾಗಿದೆ. ಗಾಯಾಳುಗಳಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚೆಟ್ಟಳ್ಳಿ ಪೊಲೀಸರು ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.