ಮಡಿಕೇರಿ, ಜ. ೧೧: ಪುಟ್ಟ ಮಕ್ಕಳು ಮನೆಗಿಂತ ಹೆಚ್ಚಾಗಿ ಅಂಗನವಾಡಿಗಳಲ್ಲಿಯೇ ಇರುವ ಈ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಲಾವತಿ ಅಭಿಮತ ವ್ಯಕ್ತಪಡಿಸಿದರು.
ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದಿಂದ ಆಯೋಜಿತ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಪ್ರೀತಿ, ಬುದ್ದಿಯನ್ನು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಕಲಿಸಬೇಕು. ಅಂಗನವಾಡಿ ಶಿಕ್ಷಕಿಯರು ಮಕ್ಕಳ ಪಾಲಿಗೆ ದೇವರ ಸಮಾನ ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್ ಮಾತನಾಡಿ, ಅಂತರರಾಷ್ಟಿçÃಯ ಮಟ್ಟದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಕೊಡಗಿನಲ್ಲಿಯೂ ಮಳೆಗಾಲದಲ್ಲಿ ಕಾಳಜಿ ಕೇಂದ್ರದ ಮೂಲಕ ರೆಡ್‌ಕ್ರಾಸ್ ನಿರಾಶ್ರಿತರಿಗೆ ನೆರವಾಗುತ್ತಾ ಅಗತ್ಯವಿದ್ದಲ್ಲೆೆಲ್ಲಾ ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಸಮಾಜದಲ್ಲಿ ಸದಾ ಶ್ಲಾಘನೀಯವಾಗಿದ್ದು, ಪುಟ್ಟ ಮಕ್ಕಳಿಗೆ ಉತ್ತಮ ಬಾಲ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಮಕ್ಕಳ ಏಳಿಗೆÀಯಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಸನ್ಮಾನದ ಗೌರವ ನೆರವೇರಿಸುವ ಮೂಲಕ ರೆಡ್‌ಕ್ರಾಸ್ ಸಂಸ್ಥೆ ಉತ್ತಮ ಕಾರ್ಯಕ್ರಮ ರೂಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಡಗು ಜಿಲ್ಲಾ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ೧೯೭೫ರಲ್ಲಿ ೧೦೦ ಅಂಗನವಾಡಿಗಳು ಕರ್ನಾಟಕದಲ್ಲಿ ಪ್ರಾರಂಭವಾಗಿದ್ದವು. ಮಾಸಿಕ ೧೫೦ ರೂ. ವೇತನದಲ್ಲಿ ಪ್ರಾರಂಭವಾದ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಈಗಲೂ ಸಕ್ರಿಯವಾಗಿ ಮುಂದುವರೆದಿದೆ.
ಈಗ ಸಮಾಜದ ಇತರೆಲ್ಲಾ ನಾಗರಿಕರಿಗೆ ಎಲ್ಲಾ ಸೌಲಭ್ಯಗಳು ದೊರಕುತ್ತಿದ್ದರೂ ಅಂಗನವಾಡಿ ಕಾಂiÀðಕರ್ತೆಯರಿಗೆ ಮಾಸಿಕ ಕೇವಲ ೧೨ ಸಾವಿರ ವೇತನ ಮಾತ್ರ ಲಭಿಸುತ್ತಿದೆ.
ಅಲ್ಪ ವೇತನದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಜೀವನ ರೂಪಿಸಿಕೊಳ್ಳಬೇಕಾಗಿದೆ. ಸರ್ಕಾರ ಎಷ್ಟೇ ಕೆಲಸ ಕಾರ್ಯಗಳ ಗುರಿ ನೀಡಿದರು ಬೇಸರ ಪಟ್ಟಕೊಳ್ಳದೇ, ನಿರ್ಲಕ್ಷö್ಯ ವಹಿಸದೆ ಶ್ರದ್ಧೆಯಿಂದ ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ ಎಂದರು.
ರೆಡ್ ಕ್ರಾಸ್ ಕೊಡಗು ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಜಾಗತಿಕವಾಗಿ ಅತ್ಯಂತ ಮಹತ್ವದ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಜಗತ್ತಿನ ಎಲ್ಲಿಯೇ ಆದರೂ ಶಾಂತಿ ಸ್ಥಾಪನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾ ಬಂದಿದೆ.
ಕೊಡಗು ರೆಡ್ ಕ್ರಾಸ್ ವತಿಯಿಂದ ಮಳಗಾಲ, ಕೋವಿಡ್ ಸಂಕಷ್ಟದ ಸಂದರ್ಭಗಳಲ್ಲಿಯೂ ವಿವಿಧ ಕಾರ್ಯಕ್ರಮಗಳೊಂದಿಗೆ ಜನಸಮುದಾಯಕ್ಕೆ ಅಗತ್ಯ ನೆರವು ನೀಡಲಾಗಿದೆ. ಭವಿಷ್ಯದಲ್ಲಿ ಮಡಿಕೇರಿಯಲ್ಲಿನ ರೆಡ್‌ಕ್ರಾಸ್ ಭವನದ ಮೇಲಂತಸ್ತಿನ ಕಾಮಗಾರಿ ಪ್ರಾರಂಭವಾಗಲಿದ್ದು, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು.
ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಪೌಷ್ಟಿಕ ಮಟ್ಟವನ್ನು ವೃದ್ಧಿಸುವುದು, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯವನ್ನು ಹಾಕುವುದು, ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಟಿಕತೆ, ಶಾಲೆ ಬಿಡುವಿ ಕೆಯನ್ನು ಕಡಿಮೆಗೊಳಿಸುವುದು ಸೇರಿದಂತೆ ತಾಯಂದಿರಿಗೆ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅಂಗನವಾಡಿ ಕಾರ್ಯಕರ್ತೆಯರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಈ ದಿನ ಗುರುತಿಸಲಾಗಿದೆ ಎಂದರು.
ರೆಡ್‌ಕ್ರಾಸ್ ಪ್ರಧಾನ ಕಾರ್ಯದರ್ಶಿ ಎಂ. ಧನಂಜಯ್ ವಂದಿಸಿ, ದೇವಕ್ಕಿ ಪ್ರಾರ್ಥಿಸಿ, ಅನಿಲ್ ಎಚ್.ಟಿ. ನಿರೂಪಿಸಿದರು. ರೆಡ್ ಕ್ರಾಸ್ ಖಜಾಂಜಿ ಪ್ರಸಾದ್ ಗೌಡ, ನಿರ್ದೇಶಕರಾದ ದೀರ್ಘಕೇಶಿ ಶಿವಣ್ಣ, ಅಂಬೆಕಲ್ ಜೀವನ್, ಮಧುಕರ್ ಶೇಟ್, ವಿಕ್ರಂಶೆಟ್ಟಿ, ಕೆ.ಟಿ. ಉತ್ತಪ್ಪ, ಕೆ.ಎಂ. ವೆಂಕಟೇಶ್, ಸಿ.ಕೆ. ಪ್ರಭಾಕರ್, ಕೆ.ಸಿ. ವಸಂತ್, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ, ಪಿ.ಆರ್. ರಾಜೇಶ್, ಕೌಶಿ ಪೊನ್ನಮ್ಮ ಸೇರಿದಂತೆ ಹಲವರು ಹಾಜರಿದ್ದರು.
ಸನ್ಮಾನಿತರು : ಮರಗೋಡು ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ (೨೧ ವರ್ಷಗಳ ಸೇವೆ), ಬಾಣೆಮೊಟ್ಟೆ ಅಂಗನವಾಡಿ ಕೇಂದ್ರದ ಟಿ. ಇ. ಅಮುದ (೨೫ ವರ್ಷಗಳ ಸೇವೆ), ತಾವೂರು ಅಂಗನವಾಡಿ ಕೇಂದ್ರದ ಹೆಚ್.ಆರ್.ಹೇಮಾವತಿ (೨೬ ವರ್ಷಗಳ ಸೇವೆ), ಕೊಚ್ಚಿ ಅಂಗನವಾಡಿ ಕೇಂದ್ರದ ಕೆ. ಯಶೋಧ (೩೨ ವರ್ಷಗಳ ಸೇವೆ), ಮಡಿಕೇರಿ ಭಗವತಿ ನಗರ ಅಂಗನವಾಡಿ ಕೇಂದ್ರದ ಕೆ.ಯು. ಶಶಿ (೩೩ ವರ್ಷಗಳ ಸೇವೆ), ಹೂಕಾಡು ಪೈಸಾರಿ ಅಂಗನವಾಡಿ ಕೇಂದ್ರದ ಜಯಶ್ರೀ ರೈ (೮ ವರ್ಷಗಳ ಸೇವೆ), ಪರಂಬು ಪೈಸಾರಿ ಅಂಗನವಾಡಿ ಕೇಂದ್ರದ ಎಂ.ಕೆ. ಭವಾನಿ (೩೫ ವರ್ಷಗಳ ಸೇವೆ), ವಣಚಲು ಅಂಗನವಾಡಿ ಕೇಂದ್ರದ ಪಿ.ಆರ್. ಧರಣಿ (೬ ವರ್ಷಗಳ ಸೇವೆ), ಬಿಳಿಗೇರಿ ಅಂಗನವಾಡಿ ಕೇಂದ್ರದ ಎಚ್.ಪಿ. ದೇವಕಿ (೩೬ ವರ್ಷಗಳ ಸೇವೆ), ಅಯ್ಯಂಗೇರಿ ಅಂಗನವಾಡಿ ಕೇಂದ್ರದ ಜಮೀಲಾ ಐ.ಎ. (೩೦ ವರ್ಷಗಳ ಸೇವೆ), ಐವತ್ತೋಕ್ಲು ಅಂಗನವಾಡಿ ಕೇಂದ್ರದ ಎ.ಟಿ. ಇಂದಿರಾ (೩೭ ವರ್ಷಗಳ ಸೇವೆ), ಅರಪಟ್ಟು ಪೈಸಾರಿ ಅಂಗನವಾಡಿಯ ಟಿ.ಕೆ. ಕವಿತಾ (೩೧ ವರ್ಷಗಳ ಸೇವೆ), ಚಟ್ಟೆಕಾಡು ಅಂಗನವಾಡಿ ಕೇಂದ್ರದ ಹರಿಣಿ ಟಿ. (೨೬ ವರ್ಷಗಳ ಸೇವೆ), ಜೋಡುಪಾಲ ಅಂಗನವಾಡಿ ಕೇಂದ್ರದ ಎಂ. ಮನೋಹರಿ (೩೪ ವರ್ಷಗಳ ಸೇವೆ), ಮಡಿಕೇರಿ ರಾಜೇಶ್ವರಿ ನಗರದ ಅಂಗನವಾಡಿಯ ಕೆ.ಸಿ. ಇಂದಿರಾ (೨೦ ವರ್ಷಗಳ ಸೇವೆ) ಅವರುಗಳನ್ನು ಸನ್ಮಾನಿಸಲಾಯಿತು.