ಕುಶಾಲನಗರ, ಜ. ೧೧: ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಕುಶಾಲನಗರ ರೈತರ ಸಹಕಾರ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಕರಾಟೆ ಪಟು ಅರುಣ್ ಮಾಚಯ್ಯ ನೆರವೇರಿಸಿ ಮಾತನಾಡಿ, ಕೊಡಗು ಕ್ರೀಡೆಯ ತವರೂರಾಗಿದ್ದು ಹಲವು ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟಕ್ಕೆ ಪರಿಚಯಿಸಿದೆ. ಜಿಲ್ಲೆಯಲ್ಲಿ ಎಲ್ಲಾ ಕ್ರೀಡೆಗಳ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು. ಕ್ರೀಡಾ ಲೋಕಕ್ಕೆ ಇತರ ಜಿಲ್ಲೆಗಳಲ್ಲಿರುವ ಸೌಲಭ್ಯಗಳು ಕೊಡಗು ಜಿಲ್ಲೆಗೆ ಕಲ್ಪಿಸದಿರುವ ಬಗ್ಗೆ ಜಿಲ್ಲೆಯ ಇಬ್ಬರು ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊAದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಅವರು ಮಾತನಾಡಿ ಕರಾಟೆ ಕ್ರೀಡೆ ಕೇವಲ ಕ್ರೀಡೆ ಅಲ್ಲದೆ ಮಕ್ಕಳ ಮಾನಸಿಕ ಬಲ ಹೆಚ್ಚಿಸುವ ಶಕ್ತಿಯಾಗಿದೆ ಎಂದರು. ಕರಾಟೆ ಕ್ರೀಡಾಪಟುಗಳಿಗೆ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಇರುವ ಬಗ್ಗೆ ಮಾಹಿತಿ ಒದಗಿಸಿದರು.

ಕುಶಾಲನಗರ ಡಿವೈಎಸ್‌ಪಿ ಚಂದ್ರಶೇಖರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಸದಾಶಿವ ಪಲ್ಲೇದ್ ತಾಲೂಕು ಅಧಿಕಾರಿ ಸುಕುಮಾರಿ, ಕರಾಟೆ ಸಂಸ್ಥೆಯ ಪ್ರಮುಖರಾದ ಪ್ರಮೋದ್, ಸಂಕೇತ್ ಮತ್ತಿತರರು ಇದ್ದರು. ಸಂದರ್ಭ ರಾಷ್ಟಿçÃಯ ಮಟ್ಟದಲ್ಲಿ ಕರಾಟೆ ಸಾಧಕರಾದ ಅನಿತಾ, ಕುನಾಲ್ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕರಾದ ಕೆ.ಪಿ. ಜಯಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು ೧೫೦೦ಕ್ಕೂ ಅಧಿಕ ಕರಾಟೆ ತರಬೇತಿ ಪಡೆದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.