ಕುಶಾಲನಗರ, ಜ. ೧೧: ಕುಶಾಲನಗರ ಪುರಸಭೆ ವ್ಯಾಪ್ತಿಯ ೪ನೇ ಬ್ಲಾಕ್ನ ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ವಾರ್ಷಿಕ ಸಭೆ ನಡೆಯಿತು. ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಜಾಂಚಿ ರೇಣುಕಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಕಚೇರಿ ಕಟ್ಟಡ ನಿರ್ಮಾಣ, ಆಡಳಿತ ಮಂಡಳಿಗೆ ಹೊಸ ನಿರ್ದೇಶಕರ ಸೇರ್ಪಡೆ, ಸದಸ್ಯತ್ವ ನೋಂದಣಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಎನ್., ಉಪಾಧ್ಯಕ್ಷರಾಗಿ ರುಕ್ಮಾಂಗದ ಎಸ್.ಆರ್., ಕಾರ್ಯದರ್ಶಿಯಾಗಿ ವಿಜೇತ ವಿ. ಕಾಮತ್, ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಹ್ಯಾರಿ ಮೊರಸ್, ಜನಾರ್ಧನ, ನೀರಜ್, ವಾಣಿ ಮತ್ತು ನಸೀಮಾ ಅವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿರ್ದೇಶಕರುಗಳಾದ ರೇಣುಕಾ ಸ್ವಾಮಿ, ಚಂದ್ರಶೇಖರ್, ಪ್ರಭು, ಸತೀಶ್, ಲೋಕೇಶ್ ಬಿ.ಬಿ., ಲೋಕೇಶ್ ಎನ್., ಮಂಜುನಾಥ್, ರಮೇಶ್, ಪ್ರವೀಣ್ ಧರ್ಮಾನಂದ, ಸುಬ್ರಮಣಿ ಸಭೆಯಲ್ಲಿ ಉಪಸ್ಥಿತರಿದ್ದರು.